ವಿದ್ಯಾರ್ಥಿನಿಯ ಮನೆಗೆ ಆರ್ಥಿಕ ನೆರವು

Upp_Naravu
Published on

ಉಪ್ಪಿನಂಗಡಿ: ಗುಡ್ಡ ಕುಸಿತಕ್ಕೊಳಗಾಗಿ ಮನೆ ಹಾನಿಗೊಳಗಾದ 34ನೇ ನೆಕ್ಕಿಲಾಡಿ ಗ್ರಾಮದ ಉಡ್ಲದಕೋಡಿ ನಿವಾಸಿ ವಿಶ್ವನಾಥ ನಾಯ್ಕ ಅವರಿಗೆ ಶ್ರೀರಾಮ ಶಾಲೆಯ ಆಡಳಿತ ಮಂಡಳಿಯ ವತಿಯಿಂದ 11 ಸಾವಿರ ರೂ. ತುರ್ತು ನೆರವು ನೀಡಲಾಯಿತು.

ವಿಶ್ವನಾಥ ನಾಯ್ಕರ ಪುತ್ರಿ ಶ್ರೀ ರಾಮ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಗುಡ್ಡ ಕುಸಿದು ಮನೆ ಹಾನಿಗೊಳಗಾಗಿರುವ ವಿಷಯ ತಿಳಿದ ಶಾಲಾ ಆಡಳಿತ ಮಂಡಳಿ, ಮನೆಯವರಿಗೆ ಧೈರ್ಯ ತುಂಬಿತು.

ಆಡಳಿತ ಮಂಡಳಿಯ ಅಧ್ಯಕ್ಷ ಸುನಿಲ್ ಅನಾವು, ಸಂಚಾಲಕ ಯು.ಜಿ.ರಾಧಾ, ಕೋಶಾಧಿಕಾರಿ ಸುಧೀರ್, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, 34 ನೆಕ್ಕಿಲಾಡಿ ಗ್ರಾ.ಪಂ ಉಪಾಧ್ಯಕ್ಷ ಹರೀಶ್ ಡಿ, ಸದಸ್ಯರಾದ ಪ್ರಶಾಂತ್ ಎನ್, ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net