ಕೆವ್ರಾಲ್ ಗ್ರಾ.ಪಂ.ಗೆ ಹಣಕಾಸು ಆಯೋಗ ಭೇಟಿ

Kin_Kemral
Published on

ಕಿನ್ನಿಗೋಳಿ: ಕೆವ್ರಾಲ್ ಗ್ರಾಮ ಪಂಚಾಯಿತಿಗೆ ಐದನೇ ಹಣಕಾಸು ಆಯೋಗ ಭೇಟಿ ಹಾಗೂ ಪರಿಶೀಲನಾ ಸಭೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ ಐದನೇ ಹಣಕಾಸು ಆಯೋಗದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಸದಸ್ಯರು ಸರ್ಕಾರದ ಸವಲತ್ತುಗಳನ್ನು ಸಮಾಜದ ಎಲ್ಲರಿಗೂ ಸಿಗುವಂತೆ ಪ್ರಯತ್ನಿಸಿ ಗ್ರಾಮದಲ್ಲಿ ಸ್ವಚ್ಛ ಪ್ರಾವಾಣಿಕ ಆಡಳಿತ ನೀಡಿ ಮಾದರಿಯಾಗಿ ಎಂದರು.

ಆಯೋಗದ ಸದಸ್ಯರಾದ ಮೊಹಮ್ಮದ್ ಸನವುಲ್ಲಾ, ಆರ್.ಎಸ್.ಪೊಂಡೆ, ಸಮಾಲೋಚಕರಾದ ಕೆಂಪೇಗೌಡ, ಸುಪ್ರಸನ್ನ, ವಿಶೇಷ ಅಧಿಕಾರಿ ವಹಾಬ್, ಯಾಲಕ್ಕಿ ಗೌಡ್ರು, ಮಂಗಳೂರು ತಾಪಂನ ಮಹೇಶ್ವರ ಭಟ್, ಮೂಲ್ಕಿ ತಾಪಂ ಇ.ಒ. ಕುಸುವಾಧರ, ಕೆವ್ರಾಲ್ ಗ್ರಾಪಂ ಅಧ್ಯಕ್ಷ ಮಯ್ಯದ್ದಿ ಉಪಸ್ಥಿತರಿದ್ದರು.

ಪಿಡಿಒ ಅರುಣ್ ಪ್ರದೀಪ್ ಡಿಸೋಜ ಪಂಚಾಯಿತಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

ಪಂಚಾಯಿತಿ ಅಧ್ಯಕ್ಷ ಮಯ್ಯದ್ದಿ, ಸದಸ್ಯರಾದ ಸುರೇಶ್ ಪಂಜ, ನವೀನ್ ಸಾಲ್ಯಾನ್ ಪಂಚಾಯಿತಿಗಳಿಗೆ ಅನುದಾನದ ಕೊರತೆ, ಪ್ರಾಕೃತಿಕ ವಿಕೋಪನಿಧಿ ಹೆಚ್ಚಳ, ನರೇಗಾದಲ್ಲಿ ಕೃಷಿಗೆ ಪ್ರಾಶಸ್ತ್ಯ, ನರೇಗಾಕೂಲಿ ಬೆಲೆ ಹೆಚ್ಚಳ, ಕುಡಿಯುವ ನೀರಿನ ಪರಿಹಾರಕ್ಕೆ ಅಣೆಕಟ್ಟು ನಿರ್ಮಾಣ, ಎಸ್ಸಿ ಎಸ್ಟಿ ಗಳಿಗೆ ಸವಲತ್ತು, ಮಳೆಗಾಲದಲ್ಲಿ ನೆರೆ ನಿಯಂತ್ರಣಕ್ಕೆ ತಡೆಗೋಡೆ, ಸಿಬ್ಬಂದಿ ಕೊರತೆ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಲೆಕ್ಕಿಗ ಕೇಶವ, ಪಂಚಾಯಿತಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net