More

    ‘ಆರ್​ಆರ್​ಆರ್​’ ಚಿತ್ರಕ್ಕಾಗಿ ಬೃಹತ್​ ಫೈಟ್​ ಚಿತ್ರೀಕರಣ

    ಹೈದರಾಬಾದ್​: ಎಸ್​.ಎಸ್​. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರದ ಚಿತ್ರೀಕರಣ ಕಳೆದ ತಿಂಗಳಿನಿಂದಲೇ ಹೈದರಾಬಾದ್​ನಲ್ಲಿ ಪ್ರಾರಂಭವಾಗಲಿದೆ. ಒಂದಿಷ್ಟು ಮಹತ್ವದ ದೃಶ್ಯಗಳ ಚಿತ್ರೀಕರಣವನ್ನು ಮುಗಿಸಿರುವ ಚಿತ್ರತಂಡವು, ಕಳೆದ ಕೆಲವು ದಿನಗಳಿಂದ ಒಂದು ದೊಡ್ಡ ಫೈಟ್​ ದೃಶ್ಯವನ್ನು ಚಿತ್ರೀಕರಿಸಲಾಗಿದೆ.

    ಇತ್ತೀಚೆಗೆ ಸೋಷಿಯಲ್​ ಮೀಡಿಯಾದಲ್ಲಿ ‘ಆರ್​ಆರ್​ಆರ್​’ ಚಿತ್ರದ ಬಿಹೈಂಡ್​ ದಿ ಸೀನ್ಸ್​ ವೀಡಿಯೋವೊಂದು ಬಿಡುಗಡೆಯಾಗಿದೆ. ಈ ವೀಡಿಯೋದಲ್ಲಿ ಚಿತ್ರತಂಡದವರು ಒಂದು ಭರ್ಜರಿ ಫೈಟ್​ ದೃಶ್ಯವನ್ನು ಚಿತ್ರೀಕರಣ ಮಾಡುತ್ತಿರುವುದನ್ನು ನೋಡಬಹುದಾಗಿದೆ.

    ಇದನ್ನೂ ಓದಿ: ‘ಆ 11ಗಂಟೆ’ಯಲ್ಲಿ ತಮನ್ನಾ ಭಾಟಿಯಾ ಮಾಡುವುದೇನು?

    ಈ ದೃಶ್ಯ ರಾತ್ರಿ ಹೊತ್ತು ನಡೆಯುವುದರಿಂದ, ಇದಕ್ಕಾಗಿಯೇ ವಿಶೇಷ ಸೆಟ್​ವೊಂದನ್ನು ನಿರ್ಮಾಣ ಮಾಡಿ, ಕಳೆದ ಕೆಲವು ರಾತ್ರಿಗಳ ಕಾಲ ಸತತ ಚಿತ್ರೀಕರಣವನ್ನು ಮಾಡಲಾಗಿದೆ.

    ಈ ಕುರಿತು ಮಾತನಾಡಿರುವ ಛಾಯಾಗ್ರಾಹಕ ಸೆಂಧಿಲ್​ ಕುಮಾರ್​ ಅವರ ಸಹಾಯಕ ವೇದ, ಇದೊಂದು ಅದ್ಭುತ ಫೈಟ್​ ದೃಶ್ಯವಾಗಿದ್ದು, ಚಿತ್ರತಂಡದವರು ಬಹಳ ಚೆನ್ನಾಗಿ ಚಿತ್ರೀಕರಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಮಿಲಿಂದ್ ಬೆತ್ತಲೆ ಓಟ ತಪ್ಪು ಅನಿಸಿದರೆ, ನಾಗಾಸಾಧುಗಳ ಮೇಲೂ ದೂರು ದಾಖಲಿಸಿ; ಪೂಜಾ ಬೇಡಿ

    ‘ಆರ್​ಆರ್​ಆರ್​’ ಚಿತ್ರದಲ್ಲಿ ಜ್ಯೂನಿಯರ್​ ಎನ್​ಟಿಆರ್​ ಮತ್ತು ರಾಮ್​ಚರಣ್​ ತೇಜ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿದ್ದು, ಅವರ ಜತೆಗೆ ಆಲಿಯಾ ಭಟ್​, ಅಜಯ್​ ದೇವಗನ್​, ಶ್ರೇಯಾ ಶರಣ್​ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

    ವಿ.ವಿ. ದಾನಯ್ಯ ನಿರ್ಮಿಸುತ್ತಿರುವ ಈ ಚಿತ್ರ, ಈ ವರ್ಷದ ಕೊನೆಗೆ ಮುಗಿಯಲಿದ್ದು, ಬಹುಶಃ ಮುಂದಿನ ವರ್ಷ ಜುಲೈನಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

    ನನ್ನ ಫಾಲೋ ಮಾಡಿದ್ರೆ ಚೆನ್ನಾಗಿರಲ್ಲ … ದೀಪಿಕಾ ಬೆದರಿಕೆ ಹಾಕಿದ್ದು ಯಾರಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts