ಬೀಡಾ ಅಂಗಡಿ ಬಿಲ್​ ವಿಚಾರಕ್ಕೆ ಕಿತ್ತಾಡಿಕೊಂಡ ಪ್ರತಿಷ್ಠಿತರ ಮಕ್ಕಳು!

Fight
Published on

ಮೈಸೂರು: ಬೀಡಾ ಅಂಗಡಿಯಲ್ಲಿ ಹಣ ನೀಡುವ ವಿಚಾರವಾಗಿ ಕೆ.ಆರ್​.ನಗರ ಕ್ಷೇತ್ರದ ಮಾಜಿ ಶಾಸಕ ಸಾರಾ.ಮಹೇಶ್​ ಪುತ್ರ ಹಾಗೂ ಪತ್ರಕರ್ತರೊಬ್ಬರ ಮಗನ ನಡುವೆ ಭಾನುವಾರ ರಾತ್ರಿ ಗಲಾಟೆಯಾಗಿದೆ.

ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಮೈಸೂರಿನ ಕುಂವೆಂಪುನಗರದಲ್ಲಿರುವ ಹೋಟೆಲ್​ ಒಂದರ ಮುಂಭಾಗ ಘಟನೆ ನಡೆದಿದೆ.

Fighting

ವಿಡಿಯೋ ವೈರಲ್​

ಉಟದ ಬಳಿಕ ಬೀಡ ತಿಂದು ಹಣ ನೀಡಲು ಸಾರಾ. ಜಯಂತ್​ ಮುಂದಾಗಿದ್ದು, ಈ ವೇಳೆ ಪತ್ರಕರ್ತರ ಮಗ ಸ್ಕ್ಯಾನರ್​​ಗೆ ಅಡ್ಡ ನಿಂತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಇಬ್ಬರ ನಡುವೆ ಬಡಿದಾಟಕ್ಕೆ ಕಾರಣವಾಗಿದೆ.

ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿ ಕುವೆಂಪುನಗರ ಪೊಲೀಸರು ಪರಿಸ್ಥಿತಿಯನ್ನು ಹತ್ತೋಟಿಗೆ ತಂದು ಇಬ್ಬರನ್ನು ಠಾಣೆಗೆ ಕರೆದೊಯ್ದು, ಬುದ್ದಿವಾದ ಹೇಳಿ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಕಳುಹಿಸಿದ್ಧಾರೆ. ವೈರಲ್​ ಆಗಿರುವ ವಿಡಿಯೋದಲ್ಲಿ ಈ ಇಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಕಂಡು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net