ರಸ್ತೆ ಸಂಪರ್ಕ ಕಡಿತ ಭೀತಿ

New Project (33)
Published on

ಸುಬ್ರಹ್ಮಣ್ಯ: ಗುತ್ತಿಗಾರು ಮೊಗ್ರ ಬಳ್ಳಕ್ಕ ಪಂಜ ಸಂಪರ್ಕ ರಸ್ತೆಯ ಮೊಗ್ರ ಎಂಬಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ರಸ್ತೆ ಬದಿ ಕುಸಿದಿದೆ. ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ. ಕುಸಿತ ತಡೆಯಲು ತಾತ್ಕಾಲಿಕವಾಗಿ ಟರ್ಪಾಲು ಹೊದಿಸಲಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದೇ ಸ್ಥಳದಲ್ಲಿ ಇನ್ನಷ್ಟು ಮಣ್ಣು ಕುಸಿದರೆ ಗುತ್ತಿಗಾರಿನಿಂದ ಪಂಜಕ್ಕೆ ಸಂಪರ್ಕ ಕಡಿಯುವ ಸಾಧ್ಯತೆ ಇದೆ.

ಸುಬ್ರಹ್ಮಣ್ಯ ಸೇರಿದಂತೆ ಘಟ್ಟ ಪ್ರದೇಶದಲ್ಲಿ ಮಳೆ ಕಡಿಮೆಯಾದ ಕಾರಣ ಕುವಾರಧಾರಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶಗಳಾದ ಐನೆಕಿದು, ಬಾಳುಗೋಡು, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ನಡುಗಲ್ಲು ಗುತ್ತಿಗಾರು, ಬಳ್ಪ, ಪಂಜ, ಕೇನ್ಯ, ಕರಿಕ್ಕಳ, ನಿಂತಿಕಲ್ಲು, ಅಲೆಕ್ಕಾಡಿ, ಮುರುಳ್ಯ, ಕೈಕಂಬ, ಕುಲ್ಕುಂದ, ಬಿಳಿನೆಲೆ, ನೆಟ್ಟಣ ಪ್ರದೇಶಗಳಲ್ಲಿ ಶನಿವಾರ ಮಳೆಯ ಪ್ರವಾಣ ಕಡಿಮೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net