ಕೃಷಿ ಭೂಮಿಗೆ ನುಗ್ಗಿದ ಅಣೆಕಟ್ಟು ನೀರು

New Project (26)
Published on

ಕಿನ್ನಿಗೋಳಿ: ಭಾರಿ ಮಳೆಯಿಂದ ನಂದಿನಿ ನದಿ ತುಂಬಿ ಹರಿಯುತ್ತಿದ್ದು, ಮೂಲ್ಕಿ ಸುತ್ತಮುತ್ತ ನೆರೆ ಅವರಿಸಿದೆ.

ಅತ್ತೂರು ಬೈಲು ಮಹಾಗಣಪತಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಡೆಯಾಗಿದೆ. ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಕೆಮ್ರಾಲ್ ಗ್ರಾಮ ಪಂಚಾಯಿತಿಯ ಪಂಜ-ಮಧ್ಯ ಸುರತ್ಕಲ್ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಕಿರು ಸೇತುವೆಯಲ್ಲಿ ಕಿಂಡಿ ಅಣೆಕಟ್ಟು ಕೂಡ ಇದ್ದು ಅನಿರೀಕ್ಷಿತ ಮಳೆ ಸುರಿದ ಕಾರಣ ಅಣೆಕಟ್ಟಿನ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ಇದರಿಂದ ಪರಿಸರದ ಸುಮಾರು 100 ಎಕರೆಗೂ ಮಿಕ್ಕಿ ಕೃಷಿ ಭೂಮಿಗೆ ಮಳೆ ನೀರು ನುಗ್ಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net