ಕಟೀಲಿನಲ್ಲಿ ತಡೆಗೋಡೆ ಬಿರುಕುಬಿಟ್ಟು ಅಪಾಯ

New Project (27)
Published on

ಕಿನ್ನಿಗೋಳಿ: ಕಟೀಲು ಸಮೀಪದ ಅಜಾರಿನಲ್ಲಿ ಬಿರುಕುಬಿಟ್ಟಿರುವ ಕಾಂಪೌಂಡ್‌ವೊಂದು ಅಪಾಯ ಸೃಷಿಸುತ್ತಿದೆ. ಕಟೀಲಿನ ಅಜಾರಿನಿಂದ ಸಿತ್ಲಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಸಮೀಪದಲ್ಲಿ ಖಾಸಗಿ ಜಮೀನಿಗೆ ಸುಮಾರು 25 ಅಡಿ ಎತ್ತರದ ಕಾಂಪೌಂಡ್ ಕಟ್ಟಿದ್ದು, ಇದೀಗ ಕಾಂಪೌಂಡ್ ಒಡೆದು ಹೋಗಿ ರಸ್ತೆಗೆ ಬೀಳುವುದರಲ್ಲಿದೆ. ರಸ್ತೆಯಲ್ಲಿ ರಾತ್ರಿ ಹಗಲು ನೂರಾರು ವಾಹನಗಳು ಸಂಚರಿಸುತ್ತಿದ್ದು ಅಪಾಯ ಸೃಷ್ಟಿಸಿದೆ. ಆದಷ್ಟು ಬೇಗ ಇದನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net