ಚಿನ್ನದಂಥ ಮಕ್ಕಳನ್ನು ಕೊಂದು ನೇಣಿಗೆ ಕೊರಳೊಡ್ಡಿದ ತಂದೆ: ಕಾಸರಗೋಡಿನಲ್ಲಿ ಹೃದಯವಿದ್ರಾವಕ ಘಟನೆ

hosadugra suicide
Published on

ಕಾಸರಗೋಡು: ಹೊಸದುರ್ಗದಲ್ಲಿ ತನ್ನ ಮಕ್ಕಳಿಬ್ಬರನ್ನು ಕೊಲೆಗೈದ ತಂದೆ ನೇಣಿಗೆ ಶರಣಾಗಿದ್ದಾನೆ.

ಚೆರ್ವತ್ತೂರ್ ಮಡಿಕುನ್ನು ನಿವಾಸಿ ರೂಪೇಶ್(38) ಆತನ ಹಾಗೂ ಮಕ್ಕಳಾದ ವೈದೇಹಿ(10) ಹಾಗೂ ಶಿವಾನಂದ್(6)ಮೃತಪಟ್ಟವರು. ಮಕ್ಕಳನ್ನು ಕೊಲೆಗೈದ ನಂತರ ತಾನು ನೇಣಿಗೆ ಶರಣಾಗಿರಬೇಕೆಂದು ಸಂಶಯಿಸಲಾಗಿದೆ.

ರೂಪೇಶ್ ಹಾಗೂ ಪತ್ನಿ ಸವಿತಾ ಮಧ್ಯೆ ಕೆಲಸಮಯದಿಂದ ವಿರಸವುಂಟಾಗಿತ್ತು. ಇದರಿಂದ ಸವಿತಾ ಹಾಗೂ ಇಬ್ಬರು ಮಕ್ಕಳು ಬೇರೆಯಾಗಿ ವಾಸಿಸುತ್ತಿದ್ದರು. ಆದರೆ, ರೂಪೇಶ್ ಮಕ್ಕಳನ್ನು ಆಗಾಗ ಮನೆಗೆ ಕರೆದುಕೊಂಡು ಬರುತ್ತಿದ್ದ.

ಮಂಗಳವಾರ ವೈದೇಹಿಯ ಜನ್ಮದಿನವಾಗಿತ್ತು. ಈ ನಿಟ್ಟಿನಲ್ಲಿ ಮಕ್ಕಳನ್ನು ನಡಿಕುನ್ನುವಿನ ತನ್ನ ತರವಾಡು ಮನೆಗೆ ಕರೆತಂದು, ಅಲ್ಲಿಂದ ತನ್ನ ಹೊಸ ಮನೆ ನಿರ್ಮಾಣವಾಗುತ್ತಿರುವಲ್ಲಿಗೆ ತೆರಳಿದ್ದ. ಇಲ್ಲಿ ಕೃತ್ಯವೆಸಗಿದ್ದಾನೆ. ಬುಧವಾರ ರೂಪೇಶ್ ಮೃತದೇಹ ಹೊಸ ಮನೆಯ ಸಿಟೌಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಮಕ್ಕಳಿಬ್ಬರ ಮೃತದೇಹ ಕೊಠಡಿಯೊಳಗೆ ಕಂಡುಬಂದಿತ್ತು. ಚಂದೇರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net