More

    ನಂಬರ್​ ಪ್ಲೇಟ್​ ಮೇಲೆ ಹೆಸರು, ಹುದ್ದೆಯಿದ್ದರೆ ಶಿಕ್ಷೆ ಫಿಕ್ಸ್​! ವಾಹನ ಸವಾರರಿಗೆ ಆರ್​ಟಿಓ ಶಾಕ್​!

    ಬೆಂಗಳೂರು: ನಿಮ್ಮ ವಾಹನದ ನಂಬರ್ ಪ್ಲೇಟ್​ ಮೇಲೆ ನಿಮ್ಮ ಸಂಘ, ಸಂಸ್ಥೆಗಳ ಹೆಸರೋ ಅಥವಾ ಜಾತಿ, ಧರ್ಮದ ಹೆಸರನ್ನೇದಾರೂ ಬರೆಸಿಕೊಂಡಿದ್ದೀರಾ? ಹಾಗಾದರೆ ಈ ಸುದ್ದಿಯನ್ನು ಗಮನವಿಟ್ಟು ಓದಿ.. ಇಲ್ಲವಾದಲ್ಲಿ ಮುಂದೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗಿ ಬರಬಹುದು.

    ಹೌದು! ಉತ್ತರ ಪ್ರದೇಶದಲ್ಲಿ ವಾಹನಗಳ ಮೇಲೆ ಯಾವುದೇ ಜಾತಿ ಹೆಸರನ್ನು ಬರೆಸಿಕೊಳ್ಳುವುದು ಅಪರಾಧ ಎಂದು ಅಲ್ಲಿನ ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ ಪ್ರಾದೇಶಿಕ ಸಾರಿಗೆ ಕಚೇರಿ (ಆರ್​ಟಿಓ) ಮಹತ್ತರ ಆದೇಶವೊಂದನ್ನು ಹೊರಡಿಸಿದೆ. ಗಾಡಿಯ ನಂಬರ್​ ಪ್ಲೇಟ್​ ಮೇಲೆ ನೋಂದಣಿ ಸಂಖ್ಯೆ ಬಿಟ್ಟು ಬೇರೆ ಏನೇ ಇದ್ದರು ಅಂತಹ ನಂಬರ್​ ಪ್ಲೇಟ್​ಗಳನ್ನು ತೆರವುಗೊಳಿಸಿ, ಅದರ ಸವಾರರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

    ನಿಮ್ಮ ಗಾಡಿಯ ಮೇಲೆ ಮೋಟಾರು ವಾಹನ ಖಾಯ್ದೆ 50-51ರ ಅನುಗುಣವಾಗಿ ವಾಹನಗಳ ನಂಬರ್ ಇರಬೇಕು. ಅದನ್ನು ಹೊರೆತಾಗಿ ಸಂಘ ಸಂಸ್ಥೆಯ ಹೆಸರೋ, ಹುದ್ದೆಯ ಹೆಸರು, ಇಲಾಖೆಯ ಹೆಸರು ಇನ್ನಿತರ ಬರಹಗಳೇನಾದರೂ ಇದ್ದರೆ ನಿಮ್ಮ ಮೇಲೆ ಆರ್​ಟಿಓ ಕಣ್ಣು ಬೀಳಲಿದೆ. ಮೇ 12ರಿಂದಲೇ ಈ ನಿಯಮ ಜಾರಿಗೆ ಬರಲಿದೆ. ಈ ರೀತಿಯ ಬರಹಗಳಿರವವರು ಈ ಕೂಡಲೇ ಅದನ್ನು ತೆಗೆಸಿಕೊಳ್ಳಬೇಕೆಂದು ಆರ್​ಟಿಓ ಪ್ರಕಟಣೆಯಲ್ಲಿ ತಿಳಿಸಿದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ನೀರು ಕೇಳುವ ನೆಪದಲ್ಲಿ 71 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 17ರ ಯುವಕ

    ಸಿಡಿ ಕೇಸ್: ರಾಮನಗರದ ಉದ್ಯಮಿಯೂ ಶಾಮೀಲು? ಕೇರಳದಲ್ಲಿ ಸ್ವಿಚ್​ ಆಫ್​ ಆದ ಮೊಬೈಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts