More

    ನೀರು ಕೇಳುವ ನೆಪದಲ್ಲಿ 71 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 17ರ ಯುವಕ

    ಹಾವೇರಿ: ಬಾಯಾರಿಕೆ ಆಗಿದೆ, ಕುಡಿಯೋದಕ್ಕೆ ನೀರು ಕೊಡಜ್ಜೀ.. ಎಂದು ಕೇಳಿದ ಯುವಕನೊಬ್ಬ ಅದೇ ಅಜ್ಜಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಹಾವೇರಿಯ ಹಿರೆಕೆರೂರಿನಲ್ಲಿ ನಡೆದಿದೆ.

    17 ವರ್ಷದ ಮಾನಸಿಕ ಅಸ್ವಸ್ಥ ಯುವಕ ಮಂಗಳವಾರದಂದು 71 ವರ್ಷದ ವೃದ್ಧೆಯ ಮನೆಗೆ ನೀರು ಕೇಳಲು ಹೋಗಿದ್ದಾನೆ. ಅನಾರೋಗ್ಯದಿಂದ ಹಾಸಿಗೆ ಮೇಲೆ ಮಲಗಿದ್ದ ವೃದ್ಧೆಯ ಬಳಿ ನೀರು ಕೊಡೆಂದು ಕೇಳಿದ್ದಾನೆ. ಆಗ ವೃದ್ಧೆ ತನ್ನಿಂದ ನೀರು ಕೊಡಲು ಆಗುವುದಿಲ್ಲ ಎಂದು ತಿಳಿಸಿದ್ದಾಳೆ. ನನ್ನ ಕಾಲು ನೋವಿದೆ, ಎದ್ದು ನೀರು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಆದರೂ ಬಾಲಕ ನೀರು ಕೇಳುವುದನ್ನು ಬಿಟ್ಟಿಲ್ಲ. ಸಾಕಷ್ಟು ಬಾರಿ ಹೇಳಿದರೂ ಆತ ಕೇಳದಿದ್ದಾಗ ಅಜ್ಜಿ ಅವನ ಮೇಲೆ ಗದರಿದ್ದಾಳೆ.

    ಅಜ್ಜಿ ಗದರಿದ್ದರಿಂದಾಗಿ ಕೆರಳಿದ ಯುವಕ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಆಕೆ ಕೂಗಿಕೊಂಡಿದ್ದಾಳೆ. ಇದರಿಂದಾಗಿ ಭಯ ಬಿದ್ದು ಆತ ಓಡಿಹೋಗಿದ್ದಾನೆ. ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸಿಡಿ ಕೇಸ್: ರಾಮನಗರದ ಉದ್ಯಮಿಯೂ ಶಾಮೀಲು? ಕೇರಳದಲ್ಲಿ ಸ್ವಿಚ್​ ಆಫ್​ ಆದ ಮೊಬೈಲ್​!

    ಹೊನ್ನಾವರದ ಮಹಿಮೆ ಗ್ರಾಮಕ್ಕೆ ಗುಡ್​ ನ್ಯೂಸ್​ ಕೊಟ್ಟ ಸುರೇಶ್​ ಕುಮಾರ್​! ಇನ್ನು ಮುಂದೆ ಬಸ್ಸಿಗಾಗಿ ಪರದಾಟವಿಲ್ಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts