ರಸ್ತೆಯಲ್ಲಿ ಕುಟುಂಬ ಸಹಿತ ಸಜೀವ ದಹನಕ್ಕೆ ಮುಂದಾದ ರೈತ; 9.91 ಲಕ್ಷ ರೂ. ದಂಡ ವಿಧಿಸಿದ ಪೊಲೀಸರು!

dk (5) (1)
Published on

ರಾಜಸ್ಥಾನ: ಜಮೀನಿನ ಪರಿಹಾರ ನೀಡುವಂತೆ ಒತ್ತಾಯಿಸಿ ಇಲ್ಲಿನ ರೈತರೊಬ್ಬರು ಕುಟುಂಬ ಸಹಿತ ಸಜೀವ ದಹನಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ರೈತನಿಗೆ ಬರೊಬ್ಬರಿ 9.91 ಲಕ್ಷ ರೂ. ದಂಡ ವಿಧಿಸಿದ ಘಟನೆ ನಡೆದಿದೆ.

ಅಲ್ಲದೇ, ರೈತ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡದಿದ್ದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಇನ್ನು ಇಲ್ಲಿನ ಜುಂಜುಮ್​ ಜಿಲ್ಲೆಯ ರೈತ ವಿದ್ಯಾಧರ್​ ಯಾದವ್​, ತಮ್ಮ ಜಮೀನನ್ನು ತಗೆದುಕೊಂಡಿರುವ ಖಾಸಗಿ ಸಿಮೆಂಟ್​ ಕಂಪನಿ ಮೂರು ಕೋಟಿ ರೂ. ಪರಿಹಾರವನ್ನು ಕೂಡಲೇ ಒದಗಿಸುವಂತೆ ಒತ್ತಾಯಿಸಿ ಇದೇ ಡಿ. 10 ರಂದು ರಸ್ತೆಯಲ್ಲಿ ಕಟ್ಟಿಗೆ ಮತ್ತು ಹುಲ್ಲುನಿ ಪೈರ್​ ಅನ್ನು ಹಾಕಿ ಪ್ರತಿಭಟನೆ ನಡೆಸಿದ್ದಾನೆ. ಅಲ್ಲದೇ, ರಸ್ತೆ ಮಧ್ಯೆ ಕುಟುಂಬ ಸಮೇತ ಕೂತು ಸಜೀವ ದಹನಕ್ಕೆ ಪ್ರಯತ್ನಿಸಿದ್ದಾನೆ. ರೈತನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ರೈತನ್ನು ಭಾರೀ ಭದ್ರತೆಯಲ್ಲಿ ಕಾಪಾಡಲಾಗಿದೆ ಎಂದು ವರದಿಯಾಗಿದೆ.

ಪ್ರತಿಭಟನೆಯನ್ನು ನಿಯಂತ್ರಿಸಲು ಡಿಎಸ್​ಪಿ ಸೇರಿದಂತೆ 99 ಪೊಲೀಸರುನ್ನು ನಿಯೋಜಿಸಬೇಕು. ಅಲ್ಲದೆ, ಪೊಲೀಸ್​ ವಾಹನ ವ್ಯವಸ್ಥೆ ಮಾಡಬೇಕಿದೆ. ಹೀಗಾಗಿ, ಪೊಲೀಸ್​ ಇಲಾಖೆ ಖಜಾನೆಗೆ 9.91 ಲಕ್ಷ ರೂ ಹೊರೆ ಬೀಳಲಿದೆ. ಖಜಾನೆಗೆ ತುಂಬುವ ಉದ್ದೇಶದಿಂದ ರೈತ ದಂಡ ಪಾವತಿಸಬೇಕು ಎಂದು ರೈತನಿಗೆ ಕಳುಹಿಸಿದ ನೋಟಿಸ್​ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net