VIDEO| ಸಿಂಹದ ಜತೆ ಹೋರಾಡಿ ಹಸುವನ್ನು ರಕ್ಷಿಸಿದ ರೈತ

Tiger Cow
Published on

ಅಹಮದಾಬಾದ್​: ರೈತನೊಬ್ಬ ಸಿಂಹದೊಂದಿಗೆ ಹೋರಾಡಿ ತನ್ನ ಹಸುವನ್ನು ಉಳಿಸಿಕೊಂಡಿರುವ ಘಟನೆ ಗುಜರಾತಿನ ಸೋಮನಾಥ ಜಿಲ್ಲೆಯಲ್ಲಿರುವ ಗಿರ್​ ಅಭಯಾರಣ್ಯ ಪ್ರದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ರೈತನ ಸಾಹಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಸಿಂಹದ ದಾಳಿಗೆ ಒಳಗಾಗಿರುವ ಹಸು ತಪ್ಪಿಸಿಕೊಳ್ಳಲಾಗದೆ ಪರದಾಡುತ್ತಿರುತ್ತದೆ. ಈ ವೇಳೆ ಇದನ್ನು ನೋಡಿದ ಮಾಲೀಕ ಮೊದಲಿಗೆ ಅದನ್ನು ಹೆದರಿಸಿ ಓಡಿಸಲು ಯತ್ನಿಸುತ್ತಾನೆ. ಆದರೆ, ಇದಕ್ಕೆ ಜಗ್ಗದ ಸಿಂಹ ಹಸುವನ್ನು ಮತ್ತಷ್ಟು ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ.

ಹೇಗಾದರೂ ಮಾಡಿ ತನ್ನ ಹಸುವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರೈತ ರಸ್ತೆ ಬಿದ್ದಿದ್ದ ಇಟ್ಟಿಗೆಗಳನ್ನು ಸಿಂಹದತ್ತ ಎಸೆಯಲು ಶುರು ಮಾಡುತ್ತಾನೆ. ಕಡೆಗೆ ತನ್ನ ಹಸುವನ್ನು ಸಿಂಹದ ದಾಳಿಯಿಂದ ಪಾರು ಮಾಡುವಲ್ಲಿ ರೈತ ಯಶಸ್ವಿಯಾಗುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ವಿಡಿಯೋವನ್ನು ಗಿರ್​ ಅಭಯಾರಣ್ಯದಲ್ಲಿ ಸಂಚರಿಸುತ್ತಿದ್ದ ವೇಳೆ ವ್ಯಕ್ತಿ ಒಬ್ಬರು ಸೆರೆ ಹಿಡಿದಿದ್ದು, ಇದನ್ನು ಬಿಜೆಪಿಯ ಕೌನ್ಸಿಲರ್ ವಿವೇಕ್​ ಕೊಡಾಟಿಯಾ ಟ್ವೀಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net