ಟೊಮ್ಯಾಟೋ ಬೆಳೆದು ಜಾಕ್​ಪಾಟ್ ಹೊಡೆದ ರೈತ!

tomato
Published on

ಕೊಪ್ಪಳ: ಟೊಮ್ಯಾಟೋ ಬೆಳೆದ ರೈತನಿಗೆ ಜ್ಯಾಕ್ ಪಾಟ್ ಹೊಡೆದಿದ್ದು ಬಂಗಾರದ ಬೆಲೆಯೊಂದಿಗೆ ಮನೆಗೆ ಮರಳಿದ್ದಾರೆ.

ಟೊಮ್ಯಾಟೊ ಪ್ರತಿ ಬಾಕ್ಸ್​ಗೆ 2900ರೂ. ಮಾರಾಟವಾಗುತ್ತಿದ್ದು ಕೊಪ್ಪಳದ ಕನಕಗಿರಿ ಸಗಟು ಮಾರುಕಟ್ಟೆಯಲ್ಲಿ ಟೊಮ್ಯಾಟೊಗೆ ಬಂಗಾರದ ಬೆಲೆ ಲಭಿಸುತ್ತಿದೆ.

ಈ ರೈತ ಮಾರುಕಟ್ಟೆಗೆ 20 ಬಾಕ್ಸ್ ಟೊಮ್ಯಾಟೊ ತಂದಿದ್ದು ಪ್ರತಿ ಬಾಕ್ಸ್​ 2900 ರೂ.ಗೆ ಮಾರಾಟವಾಗಿದೆ. ಟ್ಯೊಮ್ಯಾಟೋ ಬೆಲೆ ಕೇಳಿ ರೈತ ಫುಲ್​ ಖುಶ್ ಆಗಿದ್ದಾರೆ. ರೈತ ಶರಣಪ್ಪ ಕರಡಿ, 20 ಬಾಕ್ಸ್ ಟೊಮ್ಯಾಟೊಗಳನ್ನು ಸುಮಾರು 58 ಸಾವಿರಕ್ಕೆ ಮಾರಾಟ ಮಾಡಿ ಜಾಕ್​ಪಾಟ್​ ಹೊಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net