ಮಗು ಹುಟ್ಟಿದ್ದಕ್ಕೆ ಸಿಹಿ ಹಂಚಿದ ರೈತ: ಮದ್ಯ ಕೊಡಿಸುವಂತೆ ಹಲ್ಲೆಗೈದು ಪ್ರಾಣ ತೆಗೆದ ನಾಲ್ವರು

police 01
ಸಾಂದರ್ಭಿಕ ಚಿತ್ರ
Published on

ಬರೇಲಿ: ಮದ್ಯಕೊಡಿಸಲಿಲ್ಲ ಎಂದು ವ್ಯಕ್ತಿ ಮೇಲೆ ಹಲ್ಲೆ ನಡೆಸಲಾಗಿದ್ದು, ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಉತ್ತರಪ್ರದೇಸ ಬರೇಲಿ ಬಳಿ ನಡೆದಿದೆ.

ಇದನ್ನೂ ಓದಿ: VIDEO| ಬೀದಿ ನಾಯಿಗೆ ಆಹಾರ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವೃದ್ಧ: ಮುಂದೆ ನಡೆದದ್ದು..? 

ಸಚಿನ್​ ಕುಮಾರ್​ ಮೃತ ದುರ್ದೈವಿಯಾಗಿದ್ದು, ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮೃತನ ಕುಟುಂಬಸ್ಥರು ದೂರು ದಾಖಲಿಸಿದ್ದು, ಆಕಾಶ್​​, ಅಕ್ಕು, ಕಲ್ಲು ಎಂಬ ಮೂರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೊರ್ವ ಆರೋಪಿ ವಿಶಾಲ್​​ಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಘಟನೆ ಹಿನ್ನೆಲೆ:

ಫರೀದ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಿಪಾರ್ತಾರಾ ಗ್ರಾಮದ ನಿವಾಸಿಯಾಗಿರುವ ಸಚಿನ್, ವೃತ್ತಿಯಿಂದ ರೈತನಾಗಿದ್ದು ಹಲವು ವರ್ಷಗಳ ಹಿಂದೆ ಶಿವಾನಿ ಎಂಬಾಕೆಯನ್ನು ವಿವಾಹವಾಗಿದ್ದ. ಈ ದಂಪತಿಗಳಿಗೆ ಜುಲೈ 30ರಂದು ಗಂಡು ಮಗು ಜನಿಸಿತ್ತು, ಈ ವೇಳೆ ಸಚಿನ್​ ಗ್ರಾಮದಲ್ಲಿ ಸಿಹಿ ಹಂಚಿದ್ದನು.

ಈ ಸುದ್ದಿ ತಿಳಿದ ವಿಕಾಸ್ ಕುಮಾರ್ ಮತ್ತು ಆತನ ಮೂವರು ಸಹೋದರರು ಬಲವಂತವಾಗಿ ಆತನ ಮನೆಗೆ ನುಗ್ಗಿ, ಸಿಹಿತಿಂಡಿ, ಮದ್ಯ ಖರೀದಿಸಲು ಹಣ ನೀಡುವಂತೆ ಶಿವಾನಿಗೆ ಕೇಳಿದ್ದಾರೆ. ಅವಳು ನಿರಾಕರಿಸಿದಾಗ, ಅವರು ಅವಳೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದಾರೆ. ಕೂಡಲೇ ಹೊಲದಲ್ಲಿಯೇ ಕೆಲಸ ಮಾಡುತ್ತಿದ್ದ ಸಚಿನ್​ ಹಾಗೂ ಆತನ ತಾಯಿ ಮನೆಗೆ ಧಾವಿಸಿದ್ದು, ಆಗ ನಾಲ್ವರು ಸೇರಿಕೊಂಡು ಸಚಿನ್​ನನ್ನು ಹಿಡಿದು ಮರಕ್ಕೆ ಕಟ್ಟಿ ರಾಡ್ ಮತ್ತು ದೊಣ್ಣೆಗಳಿಂದ ಹೊಡೆದಿದ್ದಾರೆ ಎಂದು ಆತನ ತಾಯಿ ದೇವಿ ಹೇಳಿದ್ದಾಳೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net