ಕುಂದಾಪುರ: ಕೊಂಕಣ ರೈಲ್ವೆಯ ಕಾರವಾರ ವಿಭಾಗೀಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಬಡ್ತಿ ಪಡೆದು ಮುಂಬೈಗೆ ವರ್ಗಾವಣೆಗೊಂಡ ಬಿ.ಬಿ.ನಿಕ್ಕಮ್‌ಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ವತಿಯಿಂದ ಹಂಗ್ಲೂರು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಬೀಳ್ಕೊಡುಗೆ ಶನಿವಾರ ನಡೆಯಿತು.
ಹಂಗ್ಲೂರು ಲಯನ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ಕುಂದಾಪುರ ನಿಲ್ದಾಣಕ್ಕೆ 40 ಲಕ್ಷ ರೂ. ವೆಚ್ಚದ ಉದ್ದೇಶಿತ ಪ್ಲಾಟ್ ಫಾರಂ ಪ್ಲೋರಿಂಗ್, ರೂಫಿಂಗ್, ಶೌಚಗೃಹ ವಿನ್ಯಾಸವನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ಬಿಡುಗಡೆ ಮಾಡಿದರು.
ಲಯನ್ಸ್ ವಲಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಲಯನ್ಸ್ ಹಂಗ್ಲೂರು ಅಧ್ಯಕ್ಷ ರೋವನ್ ಡಿಕೋಸ್ತಾ, ಜತೆ ಕಾರ್ಯದರ್ಶಿ ರಮೇಶ್ ಶೆಟ್ಟಿ, ಕೋಶಾಧಿಕಾರಿ ಪುನೀತ್, ಹಂಗ್ಲೂರು ಲಯನ್ಸ್ ಕ್ಲಬ್, ಕುಂದಾಪುರ ಅಮೃತಧಾರಾ ಕೋಟೇಶ್ವರ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ರೆಡ್‌ಕ್ರಾಸ್, ವಿವಿಧ ಸಂಘ ಸಂಸ್ಥೆ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ತನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಸಂಚಾಲಕ ವಿವೇಕ್ ನಾಯಕ್ ನಿರೂಪಿಸಿದರು. ತಾಂತ್ರಿಕ ಸಲಹೆಗಾರ ಗೌತಮ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ಪ್ರವೀಣ್ ಟಿ. ವಂದಿಸಿದರು.