ದೂರದೃಷ್ಟಿ ಚಿಂತನೆಯಿಂದ ಸಾಂಘಿಕ ಸಾಮರ್ಥ್ಯ

gawri ranga mantapa
ಆಲಂದೂರು ಮಾನಸ ಮಿತ್ರಮಂಡಳಿಯ 21ನೇ ವರ್ಷದ ಶಾರದೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ವಾಮನ ಇಡ್ಯಾ ಉದ್ಘಾಟಿಸಿದರು.
Published on

ಬೈಂದೂರು: ಯುವ ಸಮುದಾಯ ದೂರದೃಷ್ಟಿ ಚಿಂತನೆ ಮೈಗೂಡಿಸಿಕೊಂಡಾಗ ಸಾಂಘಿಕ ಸಾಮರ್ಥ್ಯ ಹೊರಬರುತ್ತದೆ. ಧಾರ್ಮಿಕ ಹಿನ್ನೆಲೆಯಲ್ಲಿ ಮುನ್ನೆಡೆದಾಗ ಗೆಲುವು ಒಲಿಯುತ್ತದೆ ಎಂದು ನಿವೃತ್ತ ಉಪನ್ಯಾಸಕ ವಾಮನ ಇಡ್ಯಾ ಸುರತ್ಕಲ್ ಹೇಳಿದರು.

ಆಲಂದೂರು ಮಾನಸ ಮಿತ್ರಮಂಡಳಿಯ 21ನೇ ವರ್ಷದ ಶಾರದೋತ್ಸವ ಪ್ರಯುಕ್ತ ನಿರ್ಮಾಣವಾದ ಗೌರಿ ರಂಗಮಂಟಪ ಲೋಕಾರ್ಪಣೆಗೊಳಿಸುವುದರ ಜತೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನಸ ಮಿತ್ರ ಮಂಡಳಿ ಅಧ್ಯಕ್ಷ ಉದಯ ಮಾಕೋಡಿ ಅಧ್ಯಕ್ಷತೆ ವಹಿಸಿದ್ದರು. ವಾಮನ ಇಡ್ಯಾ ಸುರತ್ಕಲ್, ನಿವೃತ್ತ ಆಹಾರ ನಿರೀಕ್ಷಕ ದೇವಪ್ಪ ಮಾಕೋಡಿ, ಸ್ಥಳದಾನಿ ಸುಬ್ಬ ಪೂಜಾರಿ ಕುಂಬ್ರಿಕೊಡ್ಲು ಅವರನ್ನು ಸನ್ಮಾನಿಸಲಾಯಿತು. ಸತೀಶ ಕೊಠಾರಿ, ಹೆಸ್ಕೆತ್ತೂರು ಫ್ರೌಢಶಾಲಾ ಮುಖ್ಯ ಶಿಕ್ಷಕ ಅಬ್ದುಲ್ ರವೂಫ್, ಶಿಕ್ಷಕ ಶ್ರೀಕಾಂತ ಕಾಮತ್ ಇದ್ದರು. ಪ್ರಕಾಶ ಮಾಕೋಡಿ ಪ್ರಸ್ತಾವನೆಗೈದರು. ಮೋಹನ ಕೊಠಾರಿ ಸ್ವಾಗತಿಸಿದರು. ಗೋಪಾಲ ಗಾಣಿಗ ವಂದಿಸಿದರು. ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net