ಇತಿಹಾಸ ಪುಟಗಳಲ್ಲಿ ಮಾದರಿ ವ್ಯಕ್ತಿತ್ವ

ahalya baayi
ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಅಹಲ್ಯಾ ಬಾಯಿ ಹೋಳ್ಕರ್ 300ನೇ ವರ್ಷಾಚರಣೆಯಲ್ಲಿ ರಾಷ್ಟ್ರ ಸೇವಿಕ ಸಮಿತಿ ಪ್ರಾಂತ ಸಹ ಬೌದ್ಧಿಕ ಪ್ರಮುಖ ಮೀನಾಕ್ಷಿ ಪುತ್ತೂರು ಅವರನ್ನು ಗೌರವಿಸಲಾಯಿತು.
Published on

ಹೆಬ್ರಿ: ಬದುಕುವುದು ಬೇರೆ, ಬದುಕಿ ಬಾಳುವುದು ಬೇರೆ. ಈ ಭೂಮಿಯ ಮೇಲೆ ಬದುಕಿದವರು ಸಾವಿನ ನಂತರ ಮರೆಯಾಗುತ್ತಾರೆ. ಆದರೆ ಬದುಕಿ ಬಾಳಿದವರು ಇತಿಹಾಸದ ಪುಟಗಳಲ್ಲಿ ಅಜರಾಮರರಾಗುತ್ತಾರೆ ಎಂದು ರಾಷ್ಟ್ರ ಸೇವಿಕ ಸಮಿತಿ ಪ್ರಾಂತ ಸಹ ಬೌದ್ಧಿಕ ಪ್ರಮುಖ ಮೀನಾಕ್ಷಿ ಪುತ್ತೂರು ಹೇಳಿದರು.

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಅಹಲ್ಯಾ ಬಾಯಿ ಹೋಳ್ಕರ್ 300ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿವ ಭಕ್ತೇ, ಸಾಧ್ವಿಯಾಗಿರುವ ಹೋಳ್ಕರ್ ತನ್ನ ಗಂಡನ ಮರಣಾನಂತರ ರಾಜ್ಯಭಾರ ನಡೆಸಿ ಸಾಕಷ್ಟು ಮಾದರಿ ಸುಧಾರಣೆಯನ್ನು ತನ್ನ ಆಡಳಿತದಲ್ಲಿ ತಂದವರು. ಎಲ್ಲರಿಗೂ ಒಂದೇ ನ್ಯಾಯ, ಗಂಡನ ಮರಣದ ನಂತರ ಹೆಂಡತಿಗೆ ಆಸ್ತಿಯ ಹಸ್ತಾಂತರ, ಟಾಪಾಲ್ ವ್ಯವಸ್ಥೆ, ಸೈನ್ಯ ಮತ್ತು ರೈತರಿಗೆ ಪ್ರಾಧಾನ್ಯ, ಸರಳ ಜೀವನ, ಸ್ತ್ರೀ ಸೈನ್ಯ ಈ ಐತಿಹಾಸಿಕ ನಿರ್ಣಯ ಕೈಗೊಂಡು ಮಾದರಿಯಾದರು ಎಂದರು.

ಪ್ರಾಂಶುಪಾಲ ಅಮರೇಶ್ ಹೆಗ್ಡೆ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯಕುಮಾರ್ ಶೆಟ್ಟಿ, ಬೋಧಕ ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಸುಹಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net