ಅಂಗನವಾಡಿ ಮಕ್ಕಳಿಗೆ ಬೀಳ್ಕೊಡುಗೆ

he
Published on

ಬೈಂದೂರು: ಉಪ್ಪುಂದ ಜನತಾ ಕಾಲನಿ ಅಂಗನವಾಡಿಯಲ್ಲಿ ಕಲಿತು ಬೇರೆ ಶಾಲೆಗೆ ಹೋಗುವ ಮಕ್ಕಳಿಗೆ ಬೀಳ್ಕೊಡುಗೆ ನಡೆಯಿತು. ನಂತರ ಪಾಲಕರು ಮತ್ತು ಮಕ್ಕಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಯಿತು. ಗ್ರಾಪಂ ಅಧ್ಯಕ್ಷ ಮೋಹನಚಂದ್ರ ಮಕ್ಕಳ ಭವಿಷ್ಯ, ಸಂಸ್ಕಾರಯುತ ಶಿಕ್ಷಣದ ಬಗ್ಗೆ ತಿಳಿಸಿದರು.

ಸಮೃದ್ಧ ಬೈಂದೂರು ಸಹಕಾರದೊಂದಿಗೆ ಬೈಂದೂರು ಅಂಜಲಿ ಆಸ್ಪತ್ರೆಯಲ್ಲಿ ಹಾಗೂ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರಂಭವಾಗುವ ಡಯಾಲಿಸಿಸ್ ಕೇಂದ್ರದ ಮತ್ತು ವಿಶೇಷ ಲ್ಯಾಬ್ ಉಪಕರಣದ ಬಗ್ಗೆ ಸಾರ್ವಜನಿಕರಿಗೆ ಇರುವ ಅವಕಾಶದ ಬಗ್ಗೆ ತಿಳಿಸಿದರು. ಗ್ರಾಪಂ ಸದಸ್ಯೆ ಸುಪ್ರೀತಾ ಶೆಟ್ಟಿ, ಬಾಲವಿಕಾಸ ಸಮಿತಿ, ಆರೋಗ್ಯ ಕಾರ್ಯಕರ್ತರು ಉಪಸ್ಥಿತರಿದ್ದರು. ಉಷಾ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net