

ಸುಬ್ರಹ್ಮಣ್ಯ: ಸೇವೆ ಮೂಲಕ ಆನಂದ ಪಡೆಯುವ ಬದುಕಿನ ಪಾಠ ಯುವ ಜನಾಂಗಕ್ಕೆ ಅಗತ್ಯ. ಇದನ್ನು ಎನ್ಎಸ್ಎಸ್ ಬೋಧಿಸುತ್ತದೆ ಎಂದು ಇಂಡೋರಷ್ಯಾ ಅಂತಾರಾಷ್ಟ್ರೀಯ ಮಟ್ಟದ ಎನ್ನೆಸ್ಸೆಸ್ ಶಿಬಿರಾರ್ಥಿ ವಿಮಲಾ ರಂಗಯ್ಯ ಹೇಳಿದರು.
ಕುಕ್ಕೆ ಎಸ್ಎಸ್ಪಿಯು ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಗೆ ಮಂಗಳವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪ್ರಾಚಾರ್ಯ ಸೋಮಶೇಖರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಜಯಪ್ರಕಾಶ್ ಆರ್., ರೋವರ್ಸ್ ಮತ್ತು ರೇಂಜರ್ಸ್ ಲೀಡರ್ ಸವಿತಾ ಕೈಲಾಸ್ ಮುಖ್ಯ ಅತಿಥಿಗಳಾಗಿದ್ದರು. ಯೋಜನಾಧಿಕಾರಿಗಳಾದ ಪೂರ್ಣಿಮಾ, ಸೌಮ್ಯಾ ದಿನೇಶ್, ಎನ್ನೆಸ್ಸೆಸ್ ನಾಯಕ ಭ್ರಮರ್, ನಾಯಕಿ ಮೌಲ್ಯಾ ಉಪಸ್ಥಿತರಿದ್ದರು.
ಸಾಧಕರಿಗೆ ಗೌರವಾರ್ಪಣೆ
ಎನ್ನೆಸ್ಸೆಸ್ ಕಾರ್ಯಕ್ರಮಗಳಿಗೆ ಸಹಕಾರ ನೀಡಿದ ಕಾಲೇಜಿನ ಸಿಬ್ಬಂದಿ ಮಹೇಶ್ ಅವರನ್ನು ಸನ್ಮಾನಿಸಲಾಯಿತು. ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಸಾನಿಕಾ ಎನ್.ಎಚ್., ಶ್ರೇಯಾ ಕೆ.ಎಸ್., ಗಗನ್ ಡಿ.ಕೆ., ಸಿಂಚನಾ ಎಚ್.ಎಚ್., ಪೂಜಾಶ್ರೀ, ಕಾರುಣ್ಯ ಡಿ.ಬಿ. ಅವರನ್ನು ಅಭಿನಂದಿಸಲಾಯಿತು.