ಧಾರ್ಮಿಕ ಶಿಕ್ಷಣದಿಂದ ಸಂಸ್ಕೃತಿ, ಸಂಸ್ಕಾರ ಬೆಳವಣಿಗೆ : ಶಿವನಾಥ ರೈ ಅಭಿಪ್ರಾಯ

New Project (1)
Published on

ಪುತ್ತೂರು ಗ್ರಾಮಾಂತರ: ಬಾಲ್ಯದಲ್ಲಿಯೇ ಧಾರ್ಮಿಕ ಶಿಕ್ಷಣ ನೀಡಿದರೆ ಮಕ್ಕಳಲ್ಲಿ ಸಂಸ್ಕೃತಿ - ಸಂಸ್ಕಾರ ಬೆಳೆಯುತ್ತದೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ಹೇಳಿದರು.

ಅರಿಯಡ್ಕ ಗ್ರಾಮದ ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ 38ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮದ ಅಂಗವಾಗಿ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.

ಶ್ರೀಕಷ್ಣ ಭಜನಾ ಮಂದಿರ ಅಧ್ಯಕ್ಷ ಎ.ರಾಮದಾಸ ರೈ ಮದ್ಲ ಅಧ್ಯಕ್ಷತೆ ವಹಿಸಿದ್ದರು. ಅರಿಯಡ್ಕ ಗ್ರಾಪಂ ಸದಸ್ಯ ಸಂತೋಷ್ ಮಣಿಯಾಣಿ ಕುತ್ಯಾಡಿ, ಮಂದಿರ ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಶ್ರೀಕೃಷ್ಣ ಭಜನಾ ಸಂಕೀರ್ತನಾ ಸಮಿತಿ ಗೌರವಾಧ್ಯಕ್ಷ ಸದಾಶಿವ ಮಣಿಯಾಣಿ ಕುತ್ಯಾಡಿ ಶುಭಹಾರೈಸಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ಮತ್ತು ಮಂದಿರ ಅಧ್ಯಕ್ಷ ಎ.ರಾಮದಾಸ್ ರೈ ಮದ್ಲ ಅವರನ್ನು ಸನ್ಮಾನಿಸಲಾಯಿತು.

ಭಜನಾ ಮಂದಿರ ಆಡಳಿತ ಸಮಿತಿ ಉಪಾಧ್ಯಕ್ಷ ಕುಶಾಲಪ್ಪ ಗೌಡ ಮಡ್ಯಂಗಳ ಮತ್ತು ವಿಶ್ವನಾಥ ರೈ ಕುತ್ಯಾಡಿ, ಗೌರವ ಸಲಹೆಗಾರರಾದ ಅಮ್ಮಣ್ಣ ರೈ ಪಾಪೆಮಜಲು ಮತ್ತು ಕುಂಞಿರಾಮ ಮಣಿಯಾಣಿ ಕುತ್ಯಾಡಿ, ಜತೆ ಕಾರ್ಯದರ್ಶಿ ಕೊರಗಪ್ಪ ಗೌಡ ಮಡ್ಯಂಗಳ, ಅರ್ಚಕ ಕರುಣಾಕರ ಗೌಡ, ಭಜನಾ ಸಂಕೀರ್ತನಾ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಕುತ್ಯಾಡಿ, ಪ್ರಧಾನ ಕಾರ್ಯದರ್ಶಿ ಪ್ರತೀಕ್ ಪೂಜಾರಿ ಆಕಾಯಿ, ಕಾರ್ಯದರ್ಶಿ ಚೇತನ್ ಕುಲಾಲ್ ಹೊಸಗದ್ದೆ, ಉಪಾಧ್ಯಕ್ಷರಾದ ಅಪ್ಪಯ್ಯ ನಾಯ್ಕ ಬಪ್ಪಪುಂಡೇಲು, ಗಂಗಾಧರ ನಾಯ್ಕ ಮಡ್ಯಂಗಳ, ಸಂಟನಾ ಕಾರ್ಯದರ್ಶಿ ದುರ್ಗಾಪ್ರಸಾದ್ ಕುತ್ಯಾಡಿ, ಮಹಿಳಾ ಭಜನಾ ಸಮಿತಿ ಗೌರವಾಧ್ಯಕ್ಷೆ ಭಾರತಿ ವಸಂತ್ ಕೌಡಿಚ್ಚಾರು, ಅಧ್ಯಕ್ಷೆ ಸೇಸಮ್ಮ ವಾಸು ಪೂಜಾರಿ ಗುಂಡ್ಯಡ್ಕ, ಪ್ರಧಾನ ಕಾರ್ಯದರ್ಶಿ ಹೇಮಲತಾ ಬಳ್ಳಿಕಾನ, ಖಜಾಂಜಿ ದೀಕ್ಷಾ ಏರಮೆ ಮತ್ತಿತರರಿದ್ದರು. ಭಜನಾ ಮಂದಿರ ಕೋಶಾಧಿಕಾರಿ ತಿಲಕ್ ರೈ ಕುತ್ಯಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದೀಪಕ್ ಕುಲಾಲ್ ಕೌಡಿಚ್ಚಾರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net