ರಸ್ತೆ ಕಾಮಗಾರಿಗೆ ಸಂಸದರಿಂದ ಗುದ್ದಲಿಪೂಜೆ

New Project (7)
Published on

ಸುಳ್ಯ: ಕೇಂದ್ರ ಸರ್ಕಾರದ ರಸ್ತೆ, ಮೂಲಸೌಕರ್ಯ ನಿಧಿಯಡಿ(ಸಿಆರ್‌ಐಎಫ್) ಸುಳ್ಯ ವಿಧಾನಸಭಾ ಕ್ಷೇತ್ರದ ಎರಡು ಪ್ರಮುಖ ರಸ್ತೆಗಳನ್ನು 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ಮಂಗಳವಾರ ನಿಂತಿಕಲ್ಲು ಜಂಕ್ಷನ್‌ನಲ್ಲಿ ಗುದ್ದಲಿಪೂಜೆ ನೆರವೇರಿಸಲಾಯಿತು.

ಸಿಆರ್‌ಐಎಫ್ ಅನುದಾನದಡಿ ಸುಳ್ಯ ತಾಲೂಕಿನ ನಿಂತಿಕಲ್ಲು- ಬೆಳ್ಳಾರೆ ರಸ್ತೆ ಹಾಗೂ ಸುಳ್ಯ- ಪೈಚಾರ್- ಬೆಳ್ಳಾರೆ ರಸ್ತೆ ಅಭಿವೃದ್ಧಿಯಾಗಲಿದೆ. ಈ ರಸ್ತೆ ಒಟ್ಟು 3.80 ಕಿ.ಮೀ. ಅಭಿವೃದ್ಧಿಯಾಗಲಿದೆ.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಮುಖರಾದ ರಾಕೇಶ್ ರೈ ಕೆಡೆಜಿ, ಹರೀಶ್ ಕಂಜಿಪಿಲಿ, ವಿನಯ್ ಕುಮಾರ್ ಕಂದಡ್ಕ, ಲಕ್ಷ್ಮೀನಾರಾಯಣ ನಡ್ಕ, ಮುರುಳ್ಯ ಗ್ರಾಪಂ ಅಧ್ಯಕ್ಷೆ ವನಿತಾ ಸುವರ್ಣ, ಕಳಂಜ ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಇಇ ಜಿತೇಂದ್ರ ಉಪಸ್ಥಿತರಿದ್ದರು. ಚಂದ್ರಶೇಖರ ಪನ್ನೆ ಸ್ವಾಗತಿಸಿದರು. ಅನೂಪ್ ಬಿಳಿಮಲೆ ವಂದಿಸಿದರು. ಅಜಿತ್ ಕುಮಾರ್ ಕಿಲಂಗೋಡಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net