96 Sequel: ತಮಿಳಿನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಚಿತ್ರಗಳನ್ನೇ ನೀಡುತ್ತ ಬಂದಿರುವ ನಿರ್ದೇಶಕ ಸಿ. ಪ್ರೇಮ್ ಕುಮಾರ್, ಇತ್ತೀಚೆಗೆ ತೆರೆಕಂಡ ‘ಮಿಯ್ಯಾಳಗನ್’ ಚಿತ್ರದಲ್ಲಿಯೂ ಅದ್ಭುತ ಯಶಸ್ಸನ್ನು ಕಂಡರು. ಸಿನಿಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದ ಬೆನ್ನಲ್ಲೇ 2018ರಲ್ಲಿ ಸೂಪರ್ ಹಿಟ್ ಚಿತ್ರಗಳ ಸಾಲಿಗೆ ಸೇರಿದ ತಮ್ಮ ಕಲ್ಟ್ ’96’ ಸಿನಿಮಾದ ಸೀಕ್ವೆಲ್ ತೆರೆಗೆ ತರಲು ನಿರ್ದೇಶಕರು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಸುಟ್ಟು ಪ್ಯಾನ್ಗಳನ್ನು ಹೊಳೆಯುವಂತೆ ಮಾಡಲು ಈ 5 ಸುಲಭ ತಂತ್ರಗಳನ್ನು ಒಮ್ಮೆ ಬಳಸಿ.. | Burnt Pans
ಈಗಾಗಲೇ ಸ್ಕ್ರಿಪ್ಟ್ ಕೆಲಸ ಆರಂಭಿಸಿರುವ ಪ್ರೇಮ್ ಕುಮಾರ್, ಪ್ರಸ್ತುತ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ಸಖತ್ ಬಿಜಿಯಾಗಿದ್ದಾರೆ ಎನ್ನಲಾಗಿದೆ. ಸಿನಿ ವರದಿಗಳ ಪ್ರಕಾರ, ವೆಲ್ಸ್ ಫಿಲ್ಮ್ ಇಂಟರ್ನ್ಯಾಷನಲ್ ಈ ಚಿತ್ರವನ್ನು ನಿರ್ಮಿಸಲಿದ್ದು, ಸಿನಿಮಾ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ. ಸಿ. ಪ್ರೇಮ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ’96’ ಚಿತ್ರದಲ್ಲಿ ವಿಜಯ್ ಸೇತುಪತಿ ಮತ್ತು ತ್ರಿಶಾ ಮುಖ್ಯಭೂಮಿಕೆಯಲ್ಲಿ ಮಿಂಚಿದ್ದಾರೆ.
ಈ ಜೋಡಿಯನ್ನು ಪ್ರಮುಖ ಪಾತ್ರಧಾರಿಗಳು ಎಂದು ಊಹಿಸದ ಪ್ರೇಕ್ಷಕರು, ಇವರಿಬ್ಬರು ನಿಜವಾದ ಪ್ರೇಮಿಗಳು ಎಂದೇ ಭಾವಿಸಿದ್ದರು. ಇದೇ ಚಿತ್ರದ ಭರ್ಜರಿ ಯಶಸ್ಸಿಗೆ ಕಾರಣವಾಯಿತು. ಕೇವಲ ನೋಡುಗರ ಮನ ಗೆಲ್ಲದ ’96’, ಬಾಕ್ಸ್ ಆಫೀಸ್ನಲ್ಲಿಯೂ ಉತ್ತಮ ಗಳಿಕೆ ಕಂಡಿತು. ಪ್ರತ್ಯೇಕವಾಗಿ ಈ ಚಿತ್ರವನ್ನು ಸಂಭ್ರಮಿಸುವ ತಮಿಳು ಅಭಿಮಾನಿಗಳು, ಇದು ಕಾಲಿವುಡ್ನ ಶ್ರೇಷ್ಠ ಪ್ರೇಮಕಥೆ ಆಧರಿತ ಸಿನಿಮಾ ಎಂದು ಹೇಳುತ್ತಾರೆ.
ಈ ಕಲ್ಟ್ ಕ್ಲಾಸಿಕ್ ಸಿನಿಮಾದ ಪಾರ್ಟ್ 2 ಬರುವುದು ಬೇಡ. ಸೀಕ್ವೆಲ್ ತಯಾರಿ ಅಗತ್ಯವಿಲ್ಲ. ಹಾಗೇನಾದರೂ ಆದರೆ, ಸಿನಿಮಾ ಗೆಲ್ಲುವುದಿಲ್ಲ. ಚಿತ್ರದ ಸೀಕ್ವೆಲ್ ನಿರ್ದೇಶಿಸುವ ಯೋಚನೆಯನ್ನು ಸಿ. ಪ್ರೇಮ್ ಕುಮಾರ್ ಇಲ್ಲಿಗೆ ಬಿಟ್ಟರೆ ಒಳ್ಳೆಯದು. ಇಲ್ಲಿಯವರೆಗೆ, ಕಾಲಿವುಡ್‌ನಲ್ಲಿ ಸೀಕ್ವೆಲ್‌ಗಳು ಬಾಕ್ಸ್ ಆಫೀಸ್ನಲ್ಲಿ ಅಷ್ಟಾಗಿ ಸಕ್ಸಸ್ ಕಂಡಿಲ್ಲ. ಇಂತಹ ಸೀಕ್ವೆಲ್ ಅಥವಾ ಪಾರ್ಟ್ 2 ಸಿನಿಮಾಗಳಿಂದ ಮೊದಲ ಭಾಗದ ಮೇಲಿನ ಪ್ರೀತಿ, ಒಲವು ಕುಸಿಯುತ್ತದೆ ಎಂದು ಚಿತ್ರದ ಅಭಿಮಾನಿಗಳು ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತಂಡಕ್ಕೆ ಕೆ.ಎಲ್. ರಾಹುಲ್ ಸ್ಪೇರ್ ಟೈರ್ ಇದ್ದಂತೆ! ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ | KL Rahul
ಆದಾಗ್ಯೂ, ಸಿ. ಪ್ರೇಮ್ ಕುಮಾರ್ ಈಗಾಗಲೇ 96 ಸೀಕ್ವೆಲ್‌ಗಾಗಿ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನು ಪ್ರಾರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಚಿತ್ರ ಹೇಗೆ ರೂಪುಗೊಳ್ಳುತ್ತದೆ. ಸಿನಿಮಾ ಪ್ರೇಕ್ಷಕರ ನಿರೀಕ್ಷೆಗಳನ್ನು ಈಡೇರಿಸಲಿದೆಯೇ? ಪಾರ್ಟ್ 1ರಂತೆ ಬ್ಲಾಕ್‌ಬಸ್ಟರ್ ಯಶಸ್ಸು ಕಾಣಲಿದೆಯೇ ಎಂಬುದನ್ನು ಮುಂಬರುವ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).