
KL Rahul: 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಫೈನಲ್ ಹಂತವನ್ನು ತಲುಪಿರುವ ರೋಹಿತ್ ಶರ್ಮ ಪಡೆ, ಅಂತಿಮ ಹಣಾಹಣಿಯಲ್ಲಿ ನ್ಯೂಜಿಲೆಂಡ್ ಎದುರು ಗೆದ್ದು ಬೀಗಲು ಎದುರುನೋಡುತ್ತಿದೆ. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಎತ್ತಿಹಿಡಿಯಲು ತುದಿಗಾಲಿನಲ್ಲಿ ನಿಂತಿದೆ. ಇನ್ನು ಟೂರ್ನಿ ಪೂರ ತನಗೆ ಕೊಟ್ಟ ಸ್ಥಾನದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಕನ್ನಡಿಗ ಕೆ.ಎಲ್. ರಾಹುಲ್ರನ್ನು ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ನವಜೋತ್ ಸಿಂಗು ಸಿಧು ಮೆಚ್ಚಿ ಮಾತನಾಡಿದ್ದಾರೆ. ಇದರೊಟ್ಟಿಗೆ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಸುಟ್ಟು ಪ್ಯಾನ್ಗಳನ್ನು ಹೊಳೆಯುವಂತೆ ಮಾಡಲು ಈ 5 ಸುಲಭ ತಂತ್ರಗಳನ್ನು ಒಮ್ಮೆ ಬಳಸಿ.. | Burnt Pans
“ಕೆ.ಎಲ್. ರಾಹುಲ್ ಒಬ್ಬ ಅತ್ಯುತ್ತಮ ಆಟಗಾರ. ವಿಕೆಟ್ ಕೀಪಿಂಗ್, ಬ್ಯಾಟರ್ ಆಗಿ ತಂಡದ ಪರ ಆಡುವ ರಾಹುಲ್, ತಮಗೆ ಯಾವ ಸ್ಥಾನ ಕೊಟ್ಟರೂ ಬೇಸರಗೊಳ್ಳದೆ, ಅದಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಾರೆ. ಇದು ನಿಜಕ್ಕೂ ಮೆಚ್ಚುವಂತದ್ದು. ಆದರೆ, ಮ್ಯಾನೇಜ್ಮೆಂಟ್ ನಡೆ ನನಗೆ ಸ್ವಲ್ಪವೂ ಇಷ್ಟವಾಗುತ್ತಿಲ್ಲ. ಎಲ್ಲಾ ಆಟಗಾರರನ್ನು ಸಮಾನರಂತೆ ಕಾಣಬೇಕು. ಭಾರತ ತಂಡದಲ್ಲಿ ರಾಹುಲ್ರನ್ನು ಕಾರಿನಲ್ಲಿ ಇರುವ ಸ್ಪೇರ್ ಟೈರ್ನಂತೆ ಬಳಸಿಕೊಳ್ಳುತ್ತಿರುವುದು ತೀರ ನೋವಿನ ಸಂಗತಿ” ಎಂದಿದ್ದಾರೆ.
“ಕೆ.ಎಲ್. ರಾಹುಲ್ ನಿಮಗೆ ಗೊತ್ತಿದೆ ಮ್ಯಾನೇಜ್ಮೆಂಟ್ ನಿಮ್ಮನ್ನು ತೀರ ತಳಮಟ್ಟದಲ್ಲಿ ಉಪಯೋಗಿಸಿಕೊಳ್ಳುತ್ತಿದೆ. ಒಂದು ರೀತಿ ಸ್ಪೇರ್ ಟೈರ್ನಂತೆ. ಕೆಲವೊಮ್ಮೆ ನಿಮ್ಮನ್ನು ವಿಕೆಟ್ ಕೀಪರ್ ಆಗಿ ಮಾತ್ರ ಆಡಿಸುತ್ತಾರೆ. ಇನ್ನು ಕೆಲವೊಮ್ಮೆ ಓಪನರ್ ಆಗಿ ಕಣಕ್ಕಿಳಿಸುತ್ತಾರೆ. ಮತ್ತೊಮ್ಮೆ, ಐದು ಅಥವಾ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ತಿಳಿಸುತ್ತಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಬಂದರೆ, ನಿಮ್ಮನ್ನು ಮೂರನೇ ಸ್ಥಾನದಲ್ಲಿ ಆಡಲು ಕೇಳ್ತಾರೆ. ನಿಯಮಿತ ಓಪನರ್‌ಗಳು ಇಲ್ಲದಿದ್ದಾಗ, ನಿಮ್ಮನ್ನು ಮತ್ತೆ ಆರಂಭಿಕ ಬ್ಯಾಟರ್ ಆಗಿ ಬರುವಂತೆ ಹೇಳುತ್ತಾರೆ” ಎಂದರು.
“ಏಕದಿನ ಪಂದ್ಯಗಳಲ್ಲಿ ಓಪನಿಂಗ್ ಬರುವುದು ಸುಲಭ. ಆದರೆ, ಟೆಸ್ಟ್‌ನಲ್ಲಿ ಇದು ಕಷ್ಟ. ಆದಾಗ್ಯೂ, ರಾಹುಲ್ ತಂಡಕ್ಕಾಗಿ ನಿಸ್ವಾರ್ಥವಾಗಿ ತಮ್ಮ ಸ್ಥಾನವನ್ನು ತ್ಯಾಗ ಮಾಡುತ್ತಲೇ ಬರುತ್ತಿದ್ದಾರೆ” ಎಂದು ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ,(ಏಜೆನ್ಸೀಸ್).
65 ಲಕ್ಷ ರೂ. ಸಾಲ… ಆರೋಪಿ ಅಫಾನ್ ಹೇಳಿಕೆ ಗೊಂದಲಮಯ! ಅಪ್ಪ-ಮಗನ ಮುಖಾಮುಖಿ ವಿಚಾರಣೆಗೆ ಖಾಕಿ ಸಜ್ಜು | Mass Murder