ಲಾಹೋರ್: ಪಾಕಿಸ್ತಾನದ ಖ್ಯಾತ ಗಾಯಕಿ ಹನಿಯಾ ಅಸ್ಲಾಂ ನಿಧನರಾಗಿದ್ದಾರೆ. ಈ ಬಗ್ಗೆ ಹನಿಯಾ ಅವರ ಸಹೋದರಿ ಜೆಬ್ ಬಂಗಾಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಆಸ್ತಿ, ಪ್ರಾಧಿಕಾರ ಮಾಡುವುದು ಕಾನೂನುಬದ್ಧವಲ್ಲ: ಪ್ರಮೋದಾದೇವಿ
ಕೋಕ್ ಸ್ಟೂಡಿಯೋದಲ್ಲಿ ‘ಲೈಲಿಜಾನ್’, ‘ಬೀಬಿ ಸನಮ್’, ‘ಪಮೋನಾ’ ಮತ್ತು ‘ಚಹುಪ್’ ಸೇರಿದಂತೆ ಹಲವು ಹಾಡುಗಳನ್ನು ಹನಿಯಾ ಹಾಡಿದ್ದರು. ಅಲ್ಲದೆ ಭಾರತೀಯ ಸಿನಿಮಾಗಳೊಂದಿಗೆ ನಂಟು ಹೊಂದಿದ್ದ ಹನಿಯಾ ಅವರು ಬಾಲಿವುಡ್ ನಟಿ ಅಲಿಯಾ ಬಟ್ ನಟನೆಯ ‘ಹೈವೇ’ ಮತ್ತು ಹಿಂದಿಯ ‘ಮದ್ರಾಸ್ ಕಫೆ’ ಸಿನಿಮಾಗಳಿಗೆ ಹಾಡುಗಳನ್ನು ಹಾಡಿದ್ದರು.
ಗಾಯಕಿ ಹನಿಯಾ ಅಸ್ಲಾಂ ಅವರಿಗೆ 30 ವರ್ಷ ವಯಸ್ಸಾಗಿತ್ತು. ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಹನಿಯಾ ನಿಧನದ ಸುದ್ದಿ ಕೇಳಿ ಆಪ್ತರು, ಸಿನಿಮಾರಂಗದ ಕಲಾವಿದರು, ಸಂಗೀತ ಕಲಾವಿದರು ಸಂತಾಪ ಸೂಚಿಸಿದ್ದಾರೆ. ಹನಿಯಾ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
Mysuru Dasara : ಈ ಬಾರಿಯ ದೀಪಾಲಂಕಾರದಲ್ಲಿ ಝಗಮಗಿಸಲಿವೆ ಸಾಂಸ್ಕೃತಿಕ ನಗರಿ!