ಅನ್ಯ ಜಾತಿಯ ಯುವಕನ ಜೊತೆ ಮದುವೆ; ನವದಂಪತಿಯನ್ನು ಹತ್ಯೆ ಮಾಡಿದ ಕುಟುಂಬಸ್ಥರು

Murder Crime
Published on

ಉನ್ನಾವೋ: ಅನ್ಯ ಧರ್ಮದ ಯುವಕನನ್ನು ಮದುವೆಯಾದ ಕಾರಣಕ್ಕೆ ಯುವತಿಯ ಕಡೆಯವರು ದಂಪತಿಗಳನ್ನು ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಉನ್ನಾವೋದಲ್ಲಿ ನಡೆದಿದೆ.

ಮರ್ಯಾದೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ಸೇರಿದಂತೆ ಏಳು ಮಂದಿಯ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮರ್ಯಾದೆ ಹತ್ಯೆ

ಠಾಕೂರ್​ ಸಮುದಾಯಕ್ಕೆ ಸೇರಿದ್ದ 17 ವರ್ಷದ ಅಪ್ರಾಪ್ತ ವಯಸಿನ ಬಾಲಕಿಯೂ ದಲಿತ ಸಮುದಾಯಕ್ಕೆ ಸೇರಿದ್ದ 19ವರ್ಷ ಪ್ರಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು.

ತಮ್ಮ ಮಗಳು ಕೆಳಜಾತಿಯ ಯುವಕನನ್ನು ಮದುವೆಯಾಗಿರುವ ವಿಚಾರ ತಿಳಿದ ಪೋಷಕರು ಖಾಯಂಪುರ ನಿವಾರವರ ಗ್ರಾಮದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ.

honour killing

ದೂರು ದಾಖಲು

ಕೂಡಲೇ ಕುಟುಂಬದ ಇತರ ಸದಸ್ಯರೊಂದಿಗೆ ಗ್ರಾಮಕ್ಕೆ ದೌಡಾಯಿಸಿದ ಬಾಲಕಿ ಪೋಷಕರು ದಂಪತಿಗಳಿಬ್ಬರನ್ನು ಹತ್ಯೆ ಮಾಡಿ ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಸಿವಾನ್​ ಪೊಲೀಸ್​ ಠಾಣಾಧಿಕಾರಿ ಅಖಿಲೇಶ್​ ತಿವಾರಿ ಘಟನೆ ನಡೆದ ಹಿಂದಿನ ದಿನ ಮೃತ ಬಾಲಕಿಯ ತಂದೆ ತಮ್ಮ ಮಗಳನ್ನು ಯುವಕನೊಬ್ಬ ಅಪಹರಣ ಮಾಡಿದ್ಧಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.

ಮಂಗಳವಾರ ಬೆಳಗ್ಗೆ ಯುವಕನ ತಂದೆ ಬಾಲಕಿಯ ಕುಟುಂಬಸ್ಥರ ವಿರುದ್ಧ ತಮ್ಮ ಮಗನನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ದುರು ದಾಖಲಿಸಿದ್ದರು.

ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಆರೋಪಿಗಳು

ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು ಮಗಳು ಕೆಲ ಜಾತಿಯ ಯುವಕನನ್ನು ವರಿಸಿದ ಕಾರಣ ಮರ್ಯಾದೆಗೆ ಅಂಜಿ ಕೃತ್ಯ ಎಸಗಿರಿವುದಾಗಿ ಹೇಳಿದ್ದಾರೆ.

ಮೊದಲಿಗೆ ದಂಪತಿಗಳಿಬ್ಬರನ್ನು ಕೊಂದು ಆ ನಂತರ ಅವರ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಅವರ ಹೆಣಗಳನ್ನು ಮಾವಿನ ಮರಕ್ಕೆ ನೇಣು ಬಿಗದಿ ಸ್ಥಿತಿಯಲ್ಲಿ ನೇತು ಹಾಕಲಾಯಿತು ಎಂದು ಬಾಲಕಿಯ ತಂದೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net