

ಗಾಂಧಿನಗರ: ಬಸ್ಗಾಗಿ ಕಾಯುತ್ತಿದ್ದ ಜನರ ಮೇಲೆ ಗುಜರಾತ್ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹರಿದ ಕಾರಣ ಐವರು ಪ್ರಾಣ ಬಿಟ್ಟಿರುವ ಘಟನೆ ಗಾಂಧಿನಗರದ ಕಲೋಲ್ನಲ್ಲಿ ನಡೆದಿದೆ.
ಘಟನೆ ಬೆಳಗ್ಗೆ 7:30ರ ಸುಮಾರಿಗೆ ನಡೆದಿದ್ದು ಬಸ್ಗಾಗಿ ಕಾಯುತ್ತಿದ್ದವರ ಮೇಲೆ ಸಾರಿಗೆ ಹರಿದಿದೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ಅತಿ ವೇಗವಾಗಿ ಬಂದ ಖಾಸಗಿ ಬಸ್ ಒಂದು ಗುಜರಾತ್ ಸಾರಿಗೆ ಸಂಸ್ತೆಯ ಬಸ್ಗೆ ಹಿಂಬದಯಿಂದ ಡಿಕ್ಕಿ ಹೊಡೆದ ಕಾರಣ ಬಸ್ ಸ್ಟ್ಯಾಂಡ್ನಲ್ಲಿ ನಿಂತಿದ್ದವರ ಮೇಲೆ ಹರಿದಿದೆ.
ಮೃತ ದುರ್ದೈವಿಗಳನ್ನು ಶಾರದ ಜಗಾರಿಯಾ(50), ಬಲವಂತ್ ಠಾಕೂರ್(45), ದಿಲೀಪ್ ಸಿನ್ಹ್ ವಿಹೋಲ್(48), ಪಾರ್ಥ್ ಪಟೇಲ್(22), ಸಾವನ್ ದರ್ಜಿ(21) ಎಮದು ಗುರುತಿಸಲಾಗಿದೆ.
ಘಟನೆಯಲ್ಲಿ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜಾಗರೂಕತೆಯಿಂದ ಚಾಲನೆ ಮಾಡಿದ ಕಾರಣ ಖಾಸಗಿ ಸಂಸ್ಥೆಯ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.