More

    ರಾಜ್ಯ ವಿಧಾನಸಭೆ ಚುನಾವಣೆ; ಜಿಲ್ಲಾವರು ಮಾಹಿತಿ ಸಂಗ್ರಹಿಸಿದ ಕೈ ನಾಯಕರು

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ತಮ್ಮ ತಮ್ಮ ಊರುಗಳಲ್ಲಿದ್ದ ಕಾಂಗ್ರೆಸ್​ ನಾಯಕರು ಬೆಂಗಳೂರಿಗೆ ದೌಡಾಯಿಸಿದ್ದು ಪಕ್ಷದ ನಾಯಕರಿಂದ ಮಾಹಿತಿ ಪಡೆಯುತ್ತಿದ್ದಾರೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ಮಾಜಿ ಸಿಎಂ ಸಿದ್ದರಾಮಯ್ಯ, ರಣದೀಪ್​ ಸಿಂಗ್​ ಸುರ್ಜೇವಾಲಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತದಾನ ಮುಗಿದ ಬೆನ್ನಲ್ಲೇ ಬೆಂಗಳೂರಿಗೆ ದೌಡಾಯಿಸಿದ್ದಾರೆ.

    ಮಾಹಿತಿ ರವಾನೆ

    ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಾಂಗ್ರೆಸ್​ ನಾಯಕರು ತಡರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು ಜೂಮ್​ ಮೀಟಿಂಗ್​ ನಡೆಸುವ ಸಾಧ್ಯತೆ ದಟ್ಟವಾಗಿದೆ.

    ಮೇ 10ರಂದು ನಡೆದ ಮತದಾನದ ಕುರಿತು ಜಿಲ್ಲಾ ಘಟಕದ ಅಧ್ಯಕ್ಷರ ಬಳಿ ಮಾಹಿತಿ ಪಡೆಯಲಿರುವ ಕೈ ನಾಯಕರು ವರದಿ ಸಿದ್ದಪಡಿಸಿ ಹೈಕಮಾಂಡಿಗೆ ರವಾನಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    Congress leader

    ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ದೂರು ನೀಡಲು ಮುಂದಾದ ಪಾಕ್​ ನಟಿ; ಟಾಂಗ್​ ಕೊಟ್ಟ ದೆಹಲಿ ಪೊಲೀಸರು

    ಹಾಲಿ ಪ್ರಕಟವಾಗಿರುವ ಮತದಾನೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್​ ಪರವಾಗಿ ಬಂದಿರುವ ಕಾರಣ ಪೂರ್ಣ ಬಹುಮತದ ಸರ್ಕಾರ ಬಂದರೆ ಯಾವ ರೀತಿ ಮುಂದುವರೆಯುವುದು ಮತ್ತು ಅತಂತ್ರ ಸ್ಥಿತಿ ನಿರ್ಮಾಣವಾದರೆ ಶಾಸಕರನ್ನು ಯಾವ ರೀತಿ ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಕುರಿತು ಕೈ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

    ಜಿಲ್ಲವಾರು ಮಾಹಿತಿ ಸಂಗ್ರಹಿಸಿದ ನಾಯಕರು

    ಮತದಾನ ಮುಕ್ತಾಯವಾದ ಹಿನ್ನಲೆಯಲ್ಲಿ ಕೈ ನಾಯಕರಾದ ಡಿ.ಕೆ. ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಜಿಲ್ಲಾ ಕಾಂಗ್ರೆಸ್​ ಘಟಕಗಳ ಅಧ್ಯಕ್ಷರಿಗೆ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ.

    ಜಿಲ್ಲೆಯಲ್ಲಿ ಯಾವ ರೀತಿ ಮತದಾನವಾಗಿದೆ ಎಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆಲ್ಲಲಿದೆ. ಯಾವ ಕಡೆ 50:50 ಹಾಗೂ ಸೋಲುವ ಕ್ಷೇತ್ರಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

    ಮಾಹಿತಿ ಸಂಗ್ರಹಿಸಿದ ಬಳಿಕ ತಡರಾತ್ರಿ ಜೂಮ್​ ಮೂಲಕ ಮೀಟಿಂಗ್​ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts