ಛೇ..ಹೀಗಾಗಬಾರ್ದಿತ್ತು! ಗಂಡನ ಅಕ್ರಮ ಸಂಬಂಧ ಪತ್ತೆಗೆ ನಕಲಿ ಇನ್​​ಸ್ಟಾಗ್ರಾಂ ಖಾತೆ ತೆರೆದ ಮಹಿಳೆಗೆ ಶಾಕ್​ | Fake Instagram

Fake Instagram
Published on

Fake Instagram : ತನ್ನ ಗಂಡನಿಗೆ ವಿವಾಹೇತರ ಸಂಬಂಧ ಇದೆ ಎಂದು ಶಂಕಿಸಿ, ಅದನ್ನು ತಿಳಿದುಕೊಳ್ಳಲು ನಕಲಿ ಇನ್‌ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಪೂರ್ವ ದೆಹಲಿಯ ಘಾಜಿಪುರದಲ್ಲಿ ನಡೆದಿದೆ.

26 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. 30 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಈ ಬಂಧನವಾಗಿದೆ. ನಕಲಿ ಇನ್​ಸ್ಟಾಗ್ರಾಂ ಖಾತೆಯನ್ನು ತೆರೆಯಲು 30 ವರ್ಷದ ಮಹಿಳೆಯ ಹೆಸರು ಮತ್ತು ಫೋಟೋಗಳನ್ನು ದುರುಪಯೋಗಪಡಿಸಿಕೊಂಡ ಆರೋಪವಿದೆ.

ಆರೋಪಿ ಮಹಿಳೆ, ಸಂತ್ರಸ್ತೆಯ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರು. ಅಕೌಂಟ್​ಗೆ ಲಿಂಕ್​ ಆಗಿದ್ದ ಫೋನ್​ ನಂಬರ್ ಆಧಾರದ​ ಮೇಲೆ ತನಿಖೆಯನ್ನು ಕೇಂದ್ರೀಕರಿಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾಳೆ.

ಆರೋಪಿ ಮಹಿಳೆ, 2023ರಲ್ಲಿ ನಂಗ್ಲೋದಲ್ಲಿ ಕೆಲಸ ಮಾಡುವ ಯುವಕನನ್ನು ಮದುವೆಯಾಗಿದ್ದಾಳೆ. ತನ್ನ ಗಂಡ 30 ವರ್ಷದ ಮಹಿಳೆಯ ಜತೆ ಇರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಪತ್ನಿ ನೋಡಿದ್ದಳು. ಹೀಗಾಗಿ, ತನ್ನ ಪತಿಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನ ಆಕೆಯಲ್ಲಿ ಮೂಡಿತು. ಅದೊಂದು ವಿವಾಹಪೂರ್ವ ಚಿತ್ರವಾಗಿದ್ದು, ಪತಿ ಮತ್ತು ಆ ಮಹಿಳೆ ಇನ್‌ಸ್ಟಾಗ್ರಾಮಂನಲ್ಲಿ ಪರಸ್ಪರ ಅನುಸರಿಸುತ್ತಿದ್ದಾರೆ ಎಂದು ಪತ್ನಿಗೆ ಅರಿವಾದಾಗ, ಇಬ್ಬರ ನಡುವೆ ಖಂಡಿತವಾಗಿ ಅಕ್ರಮ ಸಂಬಂಧ ಇದೆ ಅಂದುಕೊಂಡಳು.

ಇದಾದ ಬಳಿಕ ಮಹಿಳೆ ತನ್ನ ಪತಿಯ ಇನ್‌ಸ್ಟಾಗ್ರಾಂ ಖಾತೆಗೆ ಲಾಗಿನ್ ಆಗಿ 30 ವರ್ಷದ ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾಳೆ. ಈ ವೇಳೆ ಆಕೆ ಖಾತೆಯನ್ನು ನಿರ್ಬಂಧಿಸಿದ್ದಾಳೆ. ನಂತರ ನಕಲಿ ಖಾತೆಯನ್ನು ತೆರೆದು, 30 ವರ್ಷದ ಮಹಿಳೆಯ ಫೋಟೋಗಳನ್ನು ಮಾರ್ಫ್ ಮಾಡಿ, ನಕಲಿ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಾದ ನಂತರ, 30 ವರ್ಷದ ಮಹಿಳೆಯ ಸ್ನೇಹಿತರೊಂದಿಗೆ ನಿಕಟವಾಗಿ ಸಂವಹನ ನಡೆಸಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ನಕಲಿ ಖಾತೆ ಎಂದು ತಿಳಿಯದಂತೆ ಆಕೆ ಹೆಚ್ಚು ಕಸ್ಟಮೈಸ್​ ಮಾಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ನಕಲಿ ಖಾತೆಯಿಂದ ಪತಿಗೆ ಫಾಲೋ ರಿಕ್ವೆಸ್ಟ್ ಕಳುಹಿಸಿದ್ದಾಳೆ. ಪತಿ ಅದನ್ನು ಸ್ವೀಕರಿಸುತ್ತಾರೆಯೇ? ಇಲ್ಲವೇ? ಎಂದು ಕಾಯುತ್ತಿರುವ ಸಮಯದಲ್ಲೇ ದೂರಿನ ಆಧಾರದ ಮೇರೆಗೆ ಪೊಲೀಸರು ಆಕೆಯನ್ನು ಹಿಡಿದಿದ್ದಾರೆ.

ಪೊಲೀಸ್ ವಿಚಾರಣೆಯ ಸಮಯದಲ್ಲಿ, ಆರೋಪಿ ಮಹಿಳೆಯ ಪತಿಗೆ ನಕಲಿ ಖಾತೆಯ ಬಗ್ಗೆ ಅಥವಾ 30 ವರ್ಷದ ಮಹಿಳೆ ಆತನನ್ನು ನಿರ್ಬಂಧಿಸಿರುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net