ಯಾದಗಿರಿ: ತುಂಬಾ ಕಷ್ಟವಿದೆ ಕಣ್ರೀ.. ದಯವಿಟ್ಟು ಒಂದಿಪ್ಪತ್ತು ಸಾವಿರ ದುಡ್ಡು ಹಾಕಿ ಸಹಾಯ ಮಾಡಿ ಎಂದು ಮೆಸೆಂಜರ್ನಲ್ಲಿ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಅನೇಕ ಸೆಲೆಬ್ರಿಟಿಗಳ ಹೆಸರಿನಲ್ಲಿರುವ ಖಾತೆಯಿಂದಲೂ ಸಾಕಷ್ಟು ಮೆಸೇಜ್ಗಳು ಬರಲಾರಂಭಿಸಿದ್ದು, ಇದು ಆನ್ಲೈನ್ ದಂಧೆಕೋರರ ಕೆಲಸ ಎನ್ನುವುದು ಜನರ ಅರಿವಿಗೆ ಬಂದಿದೆ. ಇದೀಗ ಅದೇ ರೀತಿಯ ಪ್ರಕರಣ ಶಾಸಕರೊಬ್ಬರ ಹೆಸರಿನಲ್ಲೂ ನಡೆದಿದೆ.
ಶಹಾಪುರ್ ಶಾಸಕ ಶರಣಬಸಪ್ಪ ದರ್ಶನಾಪುರ ಅವರ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದಿರುವ ದಂಧೆಕೋರರು ಶಾಸಕರ ಆಪ್ತರ ಬಳಿಯೇ ಹಣ ಪೀಕಲು ಮುಂದಾಗಿದ್ದಾರೆ. ಫೇಸ್ಬುಕ್ ಮೆಸೆಂಜರ್ನಲ್ಲಿ ಶಾಸಕರ ಹೆಸರಿನಲ್ಲಿ ಮೆಸೇಜ್ ಮಾಡಿದ ದಂಧೆಕೋರರು, ಅರ್ಜೆಂಟಾಗಿ 20 ಸಾವಿರ ರೂಪಾಯಿ ಬೇಕೆಂದಿದ್ದಾರೆ. ಈಗಲೇ ಕೊಡು ನಾನು ಸಂಜೆ 6 ಗಂಟೆಯೊಳಗೆ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದಾರೆ. ಅನುಮಾನ ಬಂದ ಸ್ನೇಹಿತರು ವಾಯ್ಸ್ ಮೆಸೇಜ್ ಕಳುಹಿಸು ಎಂದಿದ್ದಾರೆ. ಆಗ ದಂಧೆಕೋರರು ಸುಮ್ಮನಾಗಿದ್ದಾರೆ.
ತಮ್ಮ ಹೆಸರಿನಲ್ಲಿ ಈ ರೀತಿ ಮೋಸ ಆಗುತ್ತಿರುವುದನ್ನು ಮನಗೊಂಡಿರುವ ಶಾಸಕರು ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ. ದಯವಿಟ್ಟು ಯಾರೂ ಇಂತಹ ಮೆಸೇಜ್ಗಳಿಗೆ ಪ್ರತಿಕ್ರಿಯಿಸಿ ಹಣ ಕಳೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ.
ಲಸಿಕೆ ಇಲ್ಲದೆ ಬರೀ ಸಿರಿಂಜ್ ಚುಚ್ಚಿ ಮೋಸ? ಅನುಮಾನ ಹುಟ್ಟಿಸಿದ ವಿಡಿಯೋ
ಬಾಸ್ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್