More

    ಲಸಿಕೆ ಇಲ್ಲದೆ ಬರೀ ಸಿರಿಂಜ್​ ಚುಚ್ಚಿ ಮೋಸ? ಅನುಮಾನ ಹುಟ್ಟಿಸಿದ ವಿಡಿಯೋ

    ಬಾಗಲಕೋಟೆ: ಕರೊನಾ ಲಸಿಕೆ ವಿತರಣೆ ಕೆಲಸ ಎಲ್ಲ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಆದರೆ ಕೆಲವು ಕಡೆ ಅನುಮಾನ ಹುಟ್ಟಿಸುವ ರೀತಿಯಲ್ಲಿ ಲಸಿಕೆ ಹಾಕುವ ಕೆಲಸವೂ ನಡೆಯುತ್ತಿದೆ. ಲಸಿಕೆಯೇ ಇಲ್ಲದೆ ಕೇವಲ ಸಿರಿಂಜ್​ ಚುಚ್ಚಿ ಕಳುಹಿಸಲಾಗುತ್ತಿದೆಯೇ ಎನ್ನುವ ಅನುಮಾನ ಈ ವಿಡಿಯೋ ನೋಡಿದವರಿಗೆ ಬರಲಾರಂಭಿಸಿದೆ.

    ಈ ವಿಡಿಯೋ ಬಾಗಲಕೋಟೆಯ ಮುಧೋಳ‌ ನಗರದ ರನ್ನ ಲೈಬ್ರರಿ ವ್ಯಾಕ್ಸಿನ್ ಕೇಂದ್ರದಲ್ಲಿ ಚಿತ್ರೀಕರಿಸಲಾಗಿದೆ. ಇಲ್ಲಿ ಚುಚ್ಚುಮದ್ದು ನೀಡುತ್ತಿರುವ ವ್ಯಕ್ತಿಯ ಹೆಸರು ವಿರೂಪಾಕ್ಷ ನೀರಲಕೇರಿ. ಆತ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾನೆ. ವ್ಯಾಕ್ಸಿನ್​ ಕೇಂದ್ರದಲ್ಲಿ ಕುರ್ಚಿ ಮೇಲೆ ಕುಳಿತು ಲಸಿಕೆ ನೀಡಲಾರಂಭಿಸಿದರೆ ಮತ್ತೆ ಏಳುವುದಿಲ್ಲವಂತೆ. ಕುಳಿತಲ್ಲೇ ಕುಳಿತು ಬಂದವರಿಗೆಲ್ಲ ಇಂಜೆಕ್ಷನ್​ ಚುಚ್ಚಿ ಕಳಿಸುತ್ತಾನೆ. ಆದರೆ ಆತ ಸಿರಿಂಜ್​ಗೆ ಲಸಿಕೆ ಹಾಕಿಕೊಂಡು ಚುಚ್ಚುತ್ತಿದ್ದಾನೆಯೇ ಎನ್ನುವ ಅನುಮಾನ ಅಲ್ಲಿನವರಿಗೆ ಕಾಡಲಾರಂಭಿಸಿದ್ದಾರೆ. ಹಾಗಾಗಿ ಆತ ಇಂಜೆಕ್ಷನ್​ ನೀಡುವ ಪರಿಯನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

    ವಿರೂಪಾಕ್ಷನ ಕೆಲಸದ ಬಗ್ಗೆ ತಾಲೂಕು ಆಡಳಿತಕ್ಕೂ ಮಾಹಿತಿ ನೀಡಲಾಗಿದೆಯಂತೆ. ಆತನ ಬಗ್ಗೆ ದೂರು ಹೆಚ್ಚಾದ ಹಿನ್ನೆಲೆಯಲ್ಲಿ ಸದ್ಯ ಲಸಿಕೆ ನೀಡುವ ಕೆಲಸದಿಂದ ಆತನನ್ನು ತೆಗೆದುಹಾಕಲಾಗಿದೆ. ಆದರೆ ಈವರೆಗೆ ಅದೆಷ್ಟೋ ಜನರು ಆತನ ಬಳಿ ಲಸಿಕೆ ಪಡೆದು ಹೋಗಿದ್ದಾರೆ. ಪ್ರಾಣ ರಕ್ಷಿಸಿಕೊಳ್ಳುವುದಕ್ಕಾಗಿ ಲಸಿಕೆ ಪಡೆಯುತ್ತಿದ್ದರೆ ಲಸಿಕೆಯನ್ನೇ ಕೊಡದೆ ಕೇವಲ ಸಿರಿಂಜ್​ ಒತ್ತಿ ಮೋಸ ಮಾಡಲಾಗಿದೆಯೇ ಎನ್ನುವುದರ ಬಗ್ಗೆ ಜನರು ಚಿಂತಿಸತೊಡಗಿದ್ದಾರೆ.

    ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

    ದೇಶವನ್ನುದ್ದೇಶಿಸಿ ಇಂದು ಪ್ರಧಾನಿ ಮೋದಿ ಭಾಷಣ: ಜನತೆಯಲ್ಲಿ ತೀವ್ರ ಕುತೂಹಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts