VIDEO| ಪಾಕ್​ ಧ್ವಜ ಧರಿಸಿ ಭಾರತ ಬಾವುಟವನ್ನು ಕಾಲಲ್ಲಿ ಮೆಟ್ಟಿ ನಿಂತಿರುವ ದ್ರೋಹಿ ಯಾರೆಂಬುದು ಬಹಿರಂಗ!

Factchek Pak Flag
Published on

ನವದೆಹಲಿ: ಪಾಕಿಸ್ತಾನ ಬಾವುಟವನ್ನು ಧರಿಸಿ ಕೈಯಲ್ಲಿ ಗನ್​ ಹಿಡಿದು ಭಾರತ ಧ್ವಜವನ್ನು ಕಾಲಲ್ಲಿ ಮೆಟ್ಟಿ ನಿಂತಿರುವ ವ್ಯಕ್ತಿ ಕೋಲ್ಕತ ಮೂಲದವನು ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಚಿತ್ರದಲ್ಲಿರು ವ್ಯಕ್ತಿ ಗನ್​ ಅನ್ನು ಭಾರತ ಧ್ವಜಕ್ಕೆ ಗುರಿ ಇಟ್ಟಿರುವುದನ್ನು ಕಾಣಬಹುದಾಗಿದೆ.

ಅನೇಕ ಫೇಸ್​ಬುಕ್​ ಬಳಕೆದಾರರು ಇದೇ ಚಿತ್ರವನ್ನು ಪೋಸ್ಟ್​ ಮಾಡಿ ಹಿಂದಿಯಲ್ಲಿ ಅಡಿಬರಹ ನೀಡಿದ್ದು, ಅದರ ಸಾರಿ ಹೀಗಿದೆ. ಈತ ಕೋಲ್ಕತದ ಮಹೆಶ್ತಲ ಏರಿಯಾದ ಸಂತೋಷ್ಪುರಿ ನಿವಾಸಿಯಾಗಿದ್ದು, ಫೋಟೋವನ್ನು ತುಂಬಾ ವೈರಲ್​ ಮಾಡಿದ್ದಕ್ಕೆ ಆತನನ್ನು ಬಂಧಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಸಾಕಷ್ಟು ಮಂದಿ ಈ ಫೋಟೋವನ್ನು ಶೇರ್​ ಕೂಡ ಮಾಡಿಕೊಂಡಿದ್ದಾರೆ. ಆ ಫೋಟೋವನ್ನು ನೀವಿಲ್ಲಿ ಕಾಣಬಹುದಾಗಿದೆ.

ಆದರೆ, ಫೋಟೋ ಹಿಂದಿನ ಸತ್ಯಾಸತ್ಯತೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಬಹಿರಂಗವಾಗಿದೆ. ಚಿತ್ರವು ಎರಡು ವರ್ಷ ಹಿಂದಿನದು. ಚಿತ್ರದಲ್ಲಿರುವ ವ್ಯಕ್ತಿ ಬಿಹಾರದ ಸಿವಾನ್​ ಏರಿಯಾದ ನಿವಾಸಿ ಸಾಜಿದ್​ ಹುಸೇನ್​. ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ ಬೆನ್ನಲ್ಲೇ ಆತನನ್ನು ಅಂದೇ ಬಂಧಿಸಲಾಗಿತ್ತು.

ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ ಸಹಾಯದಿಂದ ಫೋಟೋವನ್ನು ಹುಡುಕಾಡಿದಾಗ ಅದಕ್ಕೆ ಸಂಬಂಧಿಸಿದ ಸುದ್ದಿ "ಸಿವನ್​ ಆನ್​ಲೈನ್​" ಹೆಸರಿನ ನ್ಯೂಸ್​ ವೆಬ್​ಸೈಟ್​ನಲ್ಲಿ ಸುದ್ದಿ ಪತ್ತೆಯಾಯಿತು. 2018, ಆಗಸ್ಟ್​ 30ರಲ್ಲಿ ವರದಿ ಪ್ರಕಟವಾಗಿತ್ತು. ಇದೇ ಸುದ್ದಿ ಪ್ರಭಾತ್​ ಖಬರ್​ ಎಂಬ ಹಿಂದಿ ವೆಬ್​ಸೈಟ್​ನಲ್ಲೂ ಅದೇ ದಿನ ವರದಿಯಾಗಿತ್ತು.

ಮಾಧ್ಯಮ ವರದಿಯ ಪ್ರಕಾರ ಸಾಜಿದ್​ ಹುಸೇನ್​ ಬಿಹಾರದ ಸಿವಾನ್​ ಏರಿಯಾದ ತಯ್ಯಬ್​ ಹುಸೇನ್​ ಮಗ. ಸಾಮಾಜಿಕ ಜಾಲತಾಣದಲ್ಲಿ ಆತನ ಫೋಟೋ ಹರಿದಾಡಿ ಬೆನ್ನಲ್ಲೇ ಭಾರತ ಧ್ವಜಕ್ಕೆ ಅವಮಾನ ಮಾಡಿದ ಆರೋಪದಲ್ಲಿ ಆತನನ್ನು ಬಂಧಿಸಲಾಗಿತ್ತು.

ಇದಕ್ಕೆ ಸಂಬಂಧಿಸಿದ ವಿಡಿಯೋ ವರದಿಯು ಅಹಮ "ಪಂಜಾಬ್​ ಕೇಸರಿ ಬಿಹಾರ್​" ಎಂಬ ಯೂಟ್ಯೂಬ್​ ಚಾನೆಲ್​ನಲ್ಲಿ 2018, ಆಗಸ್ಟ್​ 31ರಂದು ಪ್ರಕಟವಾಗಿದೆ. ಈ ಎಲ್ಲ ವರದಿಗಳಿಂದ ದೃಢಪಡುವುದೇನೆಂದರೆ ಸದ್ಯ ವೈರಲ್​ ಆಗಿರುವ ಫೋಟೋ ಎರಡು ವರ್ಷ ಹಳೆಯದು. ಸದ್ಯ ಈ ಫೋಟೋವನ್ನು ಅಪಪ್ರಚಾರದ ಉದ್ದೇಶವಾಗಿ ಬಳಸಿಕೊಳ್ಳಲಾಗಿದೆ ಎಂಬುದು ಫ್ಯಾಕ್ಟ್​ಚೆಕ್​ನಲ್ಲಿ ಬಹಿರಂಗವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net