VIDEO| ಕರೊನಾಗೂ ಕ್ಯಾರೆ ಎನ್ನದೇ ಡ್ಯಾನ್ಸ್​ ಮಾಡಿ ಪತ್ನಿಗೆ ಧೈರ್ಯ ತುಂಬಿದ ಸೋಂಕಿತ...!

Coronavirus
Published on

ಉಡುಪಿ: ಕರೊನಾ ಪಾಸಿಟಿವ್ ಬಂದರೆ ಜೀವ ಹೋಗುತ್ತದೆ ಎಂದು ಭೀತಿ ಹುಟ್ಟಿಸುವವರ ನಡುವೆ ಇಲ್ಲೋರ್ವರು ಖುಷಿಯನ್ನು ಹಂಚಿ ಕರೊನಾಗೆ ಸೆಡ್ಡು ಹೊಡೆದಿದ್ದಾರೆ.

ಹೌದು, ಕೋಟದ ಹೊಟೇಲ್ ಮಾಲೀಕರೊಬ್ಬರು ತಮ್ಮ ಪತ್ನಿಗೆ ವಿಡಿಯೋ ಕಾಲ್ ಮಾಡಿ ಧೈರ್ಯ ಹೇಳಿದ ವಿಡಿಯೋ ಇದೀಗ ವೈರಲ್​ ಆಗಿದೆ. ಪಾಸಿಟಿವ್ ಇದ್ದರೂ ಸಹ ತಾನು ಋಷಿಯಾಗಿದ್ದು ಮನೆಯವರನ್ನು ಖುಷಿಪಡಿಸಿದ್ದಾರೆ.

ಡಾ.ರಾಜಕುಮಾರ್ ಅಭಿಮಾನಿಯಾಗಿರವ ಅವರು ರಾಜ್ ಗೀತೆಗೆ ನರ್ತಿಸಿ ಪತ್ನಿಯನ್ನು ನಗಿಸಿದ್ದಾರೆ. ಇವರು ಕರೊನಾ ಪಾಸಿಟಿವ್ ಬಂದ ಬಳಿಕ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಮನೆಯ ಉಳಿದ ಸದಸ್ಯರು ಭಯ ಭೀತರಾಗಬಾರದು ಎನ್ನುವ ಉದ್ದೇಶಕ್ಕೆ ನೃತ್ಯ ಮಾಡಿ ಪಾಸಿಟಿವಿಟಿ ಹಂಚಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net