ಪತ್ನಿ ಕಿರುಕುಳಕ್ಕೆ ಬೇಸತ್ತು ಪ್ರಾಣಬಿಟ್ಟ Cafe Owner; ಸಂತ್ರಸ್ತ ಮಾಡಿದ ವಿಡಿಯೋದಲ್ಲಿ ಬಯಲಾಯ್ತು ಆಘಾತಕಾರಿ ಅಂಶ

Cafe Owner
Published on

ನವದೆಹಲಿ: ಟೆಕ್ಕಿ ಅತುಲ್​ ಸುಭಾಷ್​ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಪ್ರಕರಣವೊಂದು ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದಿದ್ದು, ಪತ್ಹಿ ಹಾಗೂ ಆಕೆಯ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ಕೆಫೆ ಮಾಲೀಕರೊಬ್ಬರು (Cafe Owner) ಆತ್ಮಹತ್ಯೆ ಮಾಡಿಕೊಂಡಿನದ್ದಾರೆ.

ಮೃತರನ್ನು ಪುನೀತ್​ ಖುರಾನಾ (Cafe Owner) ಎಂದು ಗುರುತಿಸಲಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಸರಣಿ ವಿಡಿಯೋಗಳನ್ನು ರೆಕಾರ್ಡ್​ ಮಾಡಿದ್ದು, ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಕಿರುಕುಳ ತಾಳಲಾರದೆ ಪುನೀತ್​ ಈ ರೀತಿ ಮಾಡಿಕೊಂಡಿರುವುದಾಗಿ ಮೃತನ ಸಂಬಂಧಿಕರು ಹಾಗೂ ಸ್ನೇಹಿತರು ಆರೋಪಿಸಿದ್ದಾರೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ನನ್ನ ಹೆಂಡತಿ ಹಾಗೂ ಆಕೆಯ ಕುಟುಂಬಸ್ಥರಿಂದ ತೀವ್ರವಾಗಿ ಚಿತ್ರಹಿಂಸೆಗೊಳಗಾಗಿರುವ ಕಾರಣ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾವು ಈಗಾಗಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಪರಸ್ಪರ ವಿಚ್ಛೇದನಕ್ಕೆ ಬಂದಾಗ ನಾವು ನ್ಯಾಯಾಲಯದಲ್ಲಿ ಕೆಲವು ಷರತ್ತುಗಳಿಗೆ ಸಹಿ ಹಾಕಿದ್ದೇವೆ. ನಾವು 180 ದಿನಗಳ ಅವಧಿಯಲ್ಲಿ ಆ ಷರತ್ತುಗಳನ್ನು ಪೂರೈಸಬೇಕು. ಆದರೆ, ನನ್ನ ಹೆಂಡತಿ ಹೊಸ ಷರತ್ತುಗಳನ್ನು ವಿಧಿಸುತ್ತಿದ್ದು, ನನ್ನ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ. 

10 ಲಕ್ಷ ರೂಪಾಯಿ ಹಣ ಕೊಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ನಾನು ಈಗಾಗಲೇ ಸಾಕಷ್ಟು ಹಣವನ್ನು ಕಳೆದುಕೊಂಡಿದ್ದು, ಈಗ ಮತ್ತೊಮ್ಮೆ ಹಣ ಕೇಳುತ್ತಿದ್ದಾರೆ. ಆದರೆ, ನನ್ನ ಬಳಿ ಕೊಡಲು ಹಣವಿಲ್ಲದ ಕಾರಣ ನಾನೂ ಈ ವಿಚಾರದಲ್ಲಿ ನನ್ನ ಹೆತ್ತವರನ್ನು ಮಧ್ಯ ತರಲು ಇಷ್ಟಪಡುವುದಿಲ್ಲ ಎಂದು ಪುನೀತ್​ ಖುರಾನಾ (Cafe Owner) ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net