ನಿಮ್ಮ ಅಂಗೈನಲ್ಲಿ ಈ ಗುರುತು ಇದೆಯಾ ಒಮ್ಮೆ ನೋಡಿ… ಇದ್ರೆ ನಿಮ್ಮಂಥ ಅದೃಷ್ಟವಂತ ಯಾರೂ ಇಲ್ಲ! Palmistry

Palmistry

Palmistry : ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಏನಾಗುತ್ತದೆ? ಉದ್ಯೋಗ ಸಿಗುತ್ತದೆಯೇ ಅಥವಾ ಇಲ್ಲವೇ? ಮದುವೆ ಆಗುತ್ತಾ? ಜೀವನದಲ್ಲಿ ಸೆಟಲ್​ ಆಗ್ತೀನಾ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯನ್ನು ಜನರು ತೋರಿಸುತ್ತಾರೆ. ಆದರೆ, ಕೆಲವರಿಗೆ ಈ ಜ್ಯೋತಿಷ್ಯದ ಮೇಲೆ ನಂಬಿಕೆ ಇರುವುದಿಲ್ಲ. ಆದರೂ ಬಹುತೇಕ ಮಂದಿ ಜಾತಕವನ್ನು ನಂಬುತ್ತಾರೆ. ಈ ಕಾರಣಕ್ಕೆ ಜ್ಯೋತಿಷಿಗಳಿಗೆ ತುಂಬಾ ಬೇಡಿಕೆ ಇದೆ.

Palmistry H Symbol 1

 

ಅಂದಹಾಗೆ ನಮ್ಮ ಗ್ರಹಗತಿ ಆಧಾರದ ಮೇಲೆ ನಮ್ಮ ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯವಾಗಿದೆ. ಜ್ಯೋತಿಷ್ಯದಲ್ಲಿ ಹಲವು ವಿಧಾನಗಳಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅದರಲ್ಲಿ ಹಸ್ತ ಸಾಮುದ್ರಿಕಾ ಕೂಡ ಒಂದು. ಹಸ್ತ ಸಾಮುದ್ರಿಕ ಎಂದರೆ ಹಸ್ತದ ಮೇಲಿನ ರೇಖೆಗಳ ಆಧಾರದ ಮೇಲೆ ಭವಿಷ್ಯವನ್ನು ಊಹಿಸುವುದು. ಈ ಹಸ್ತಸಾಮುದ್ರಿಕ ಶಾಸ್ತ್ರವನ್ನು ನಂಬುವ ಅನೇಕ ಜನರಿದ್ದಾರೆ. ಅವರಲ್ಲಿ ಸಾಮಾನ್ಯ ನಾಗರಿಕರಷ್ಟೇ ಅಲ್ಲ ಸೆಲೆಬ್ರಿಟಿಗಳು ಕೂಡ ಇದ್ದಾರೆ.

ನಮ್ಮ ಅಂಗೈನಲ್ಲಿ ವಿವಿಧ ರೀತಿಯ ರೇಖೆಗಳು ಅಥವಾ ಗೀರುಗಳಿವೆ. ಈ ಗೆರೆಗಳಿಂದಾಗಿ ಕೆಲವೊಂದು ಚಿಹ್ನೆಗಳು ಕೂಡ ರಚನೆಯಾಗಿವೆ. ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಚಿಹ್ನೆಗಳಿರುತ್ತವೆ. ಕೆಲವರಲ್ಲಿ ಧ್ವಜ ಅಥವಾ ಬಾವುಟದ ಗುರುತು ಕೂಡ ಇರುತ್ತದೆ. ಧ್ವಜದ ಗುರುತು ಹೊಂದಿರುವುದರ ಅರ್ಥ ಏನೆಂದು ನಾವೀಗ ತಿಳಿದುಕೊಳ್ಳೋಣ.

ಇದನ್ನೂ ಓದಿ: ತಂಡದಲ್ಲಿ ಉಳಿಯಲು ನಿನಗೆಷ್ಟು ಬೇಕು? ಶ್ರೇಯಸ್​ ಬೇಡಿಕೆಯಿಟ್ಟ ಹಣದ ಮೊತ್ತ ಕೇಳಿ KKR ಮ್ಯಾನೇಜ್​​ಮೆಂಟ್​ ಶಾಕ್! Shreyas Iyer

Palmistry

ಅಂಗೈನಲ್ಲಿ ಧ್ವಜ ಚಿಹ್ನೆಯನ್ನು ಹೊಂದಿದ್ದರೆ ಅದು ಆ ವ್ಯಕ್ತಿಯ ಗೆಲುವು ಅಥವಾ ವಿಜಯವನ್ನು ಸೂಚಿಸುತ್ತದೆ. ಈ ಚಿಹ್ನೆ ಹೊಂದಿರುವ ವ್ಯಕ್ತಿ ತುಂಬಾ ಬುದ್ಧಿವಂತರಾಗಿರುತ್ತಾರೆ. ನಿಮ್ಮ ಅಂಗೈನ ಗುರು ಪರ್ವತದ ಮೇಲೆ ಈ ಚಿಹ್ನೆ ಕಂಡುಬಂದರೆ, ಅಂತಹವರು ವಿಜ್ಞಾನ, ವೇದಗಳು ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಹೆಚ್ಚಿನ ಜ್ಞಾನವನ್ನು ಹೊಂದಿರುತ್ತಾರೆ ಮತ್ತು ಉನ್ನತ ಶಿಕ್ಷಣವನ್ನು ಹೊಂದಿರುತ್ತಾರೆ. ಅಲ್ಲದೆ, ಮಿಲಿಟರಿ ಅಥವಾ ರಕ್ಷಣಾ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೇರುತ್ತಾರೆ.

ಅದೇ ಧ್ವಜ ಚಿಹ್ನೆಯು ಶನಿ ಪರ್ವತದ ಮೇಲೆ ನೆಲೆಗೊಂಡಿದ್ದರೆ, ಸಭ್ಯ, ಆಧ್ಯಾತ್ಮಿಕ, ದೀರ್ಘ ದೃಷ್ಟಿಯನ್ನು ಹೊಂದಿರುವ ವ್ಯಕ್ತಿಯಾಗಿರುತ್ತಾರೆ ಮತ್ತು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಮೊದಲ ಸ್ಥಾನದಲ್ಲಿರುತ್ತಾರೆ. ಸೂರ್ಯ ಪರ್ವತದ ಮೇಲೆ ಧ್ವಜ ಚಿಹ್ನೆ ಕಂಡುಬಂದರೆ, ವ್ಯಕ್ತಿಯು ಹೆಚ್ಚು ಗೌರವಾನ್ವಿತ ಮತ್ತು ಗುರುತಿಸಲ್ಪಟ್ಟ, ಪ್ರಸಿದ್ಧ, ಮತ್ತು ಆವಿಷ್ಕಾರಕನೂ ಆಗಿರಬಹುದು.

* ಗುರು ಪರ್ವತದ ಮೇಲೆ ಧ್ವಜ ಚಿಹ್ನೆ ( ಇಂಡೆಕ್ಸ್ ಬೆರಳಿನ ಕೆಳಗೆ): ನಾಯಕತ್ವ ಮತ್ತು ಮಹತ್ವಾಕಾಂಕ್ಷೆ
* ಶನಿ ಪರ್ವತದ ಮೇಲೆ ಧ್ವಜ ಚಿಹ್ನೆ (ಮಧ್ಯದ ಬೆರಳಿನ ಕೆಳಗೆ): ಜವಾಬ್ದಾರಿ ಮತ್ತು ಶಿಸ್ತು
* ಅಪೊಲೊ ನಪರ್ವತದ ಮೇಲೆ ಧ್ವಜ ಚಿಹ್ನೆ (ರಿಂಗ್ ಫಿಂಗರ್ ಕೆಳಗೆ): ಸೃಜನಶೀಲತೆ ಮತ್ತು ಖ್ಯಾತಿ
* ಬುಧ ಪರ್ವತದ ಮೇಲೆ ಧ್ವಜ ಚಿಹ್ನೆ (ಕಿರುಬೆರಳಿನ ಕೆಳಗೆ): ಸಂವಹನ ಮತ್ತು ವ್ಯಾಪಾರ ಯಶಸ್ಸು
* ಶುಕ್ರ ಪರ್ವತದ ಮೇಲೆ ಧ್ವಜ ಚಿಹ್ನೆ (ಹೆಬ್ಬೆರಳಿ ಕೆಳಗೆ): ಉತ್ಸಾಹ ಮತ್ತು ಸಂಬಂಧಗಳು
* ಸೂರ್ಯ ಪರ್ವತದ ಮೇಲೆ ಧ್ವಜ ಚಿಹ್ನೆ (ಉಂಗುರ ಬೆರಳಿನ ಕೆಳಗೆ): ವಿಜಯ ಮತ್ತು ಗುರುತಿಸುವಿಕೆ
* ಚಂದ್ರ ಪರ್ವತದ ಮೇಲೆ ಧ್ವಜ ಚಿಹ್ನೆ (ಅಂಗೈಯ ತಳ, ಹೆಬ್ಬೆರಳಿನ ಎದುರು): ಅಂತಃಪ್ರಜ್ಞೆ ಮತ್ತು ಪ್ರತಿಭೆ

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

ತನ್ನ ಕಣ್ಣಿಗೆ ಸುತ್ತಿಕೊಂಡಿದ್ದ ಚರ್ಮವನ್ನು ಹಾವು ಹೇಗೆ ಬಿಡಿಸಿಕೊಳ್ಳುತ್ತೆ ನೋಡಿ… ರೋಚಕ ವಿಡಿಯೋ ವೈರಲ್​ | Snake

 

 

 

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…