ಪ್ಲೇಬಾಯ್ ರೂಪದರ್ಶಿ ಈಗ ಫುಟ್‌ಬಾಲ್ ಕ್ಲಬ್ ಒಡತಿ!

anamaria-prodan-web
Published on

ಬುಕಾರೆಸ್ಟ್: ಪ್ಲೇಬಾಯ್ ಮ್ಯಾಗಝಿನ್‌ನಲ್ಲಿ ಮಿಂಚುತ್ತಿದ್ದ ರೂಪದರ್ಶಿಯೊಬ್ಬರು ಈಗ ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದ ಫುಟ್‌ಬಾಲ್ ಕ್ಲಬ್‌ಗೆ ಆಪದ್ಭಾಂದವರಾಗಿದ್ದಾರೆ. ರೊಮೇನಿಯಾದ ಅತ್ಯಂತ ಯಶಸ್ವಿ ಫುಟ್‌ಬಾಲ್ ಕ್ಲಬ್ ಎನಿಸಿದ್ದ ಎಎಫ್​ಸಿ ಹೆರ್ಮನ್‌ಸ್ಟಡ್ ಇತ್ತೀಚೆಗೆ ಭಾರಿ ನಷ್ಟದಲ್ಲಿತ್ತು. ಮಾಜಿ ಪ್ಲೇಬಾಯ್ ರೂಪದರ್ಶಿ ಆನಾಮರಿಯಾ ಪ್ರೊಡನ್ ರೆಘೆಕಾಂಪ್ ಈಗ ಈ ಫುಟ್‌ಬಾಲ್ ಕ್ಲಬ್‌ಅನ್ನು ಖರೀದಿಸಿದ್ದು, ಅದರ ಹೊಸ ಒಡತಿಯಾಗಿದ್ದಾರೆ.

2015ರಲ್ಲಿ ಸ್ಥಾಪಿಸಲ್ಪಟ್ಟಿದ್ದ ಹೆರ್ಮನ್‌ಸ್ಟಡ್ ಕ್ಲಬ್ 2018ರಲ್ಲಿ ಟಾಪ್ ಡಿವಿಷನ್‌ಗೆ ಬಡ್ತಿ ಪಡೆದಿತ್ತು. ಆದರೆ ಕ್ಲಬ್ ಸುಮಾರು 7.5 ಕೋಟಿ ರೂ.ಗೂ ಅಧಿಕ ಮೊತ್ತದ ಸಾಲದಲ್ಲಿದೆ ಎನ್ನಲಾಗಿದೆ. ರೊಮೇನಿಯಾದ ಫುಟ್‌ಬಾಲ್ ಆಟಗಾರ ಲೌರೆಂಟಿಯು ರೆಘೆಕಾಂಪ್ ಅವರನ್ನು ವಿವಾಹವಾಗಿರುವ 47 ವರ್ಷದ ಆನಾಮರಿಯಾ ಪ್ರೊಡನ್, ಇತ್ತೀಚೆಗೆ ಫುಟ್‌ಬಾಲ್ ಏಜೆಂಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

‘ಹೆರ್ಮನ್‌ಸ್ಟಡ್ ಕ್ಲಬ್ ಹೊಸ ಚೈತನ್ಯ ಪಡೆದುಕೊಂಡಿದೆ. ಕ್ಲಬ್‌ಗೆ ಈಗ ಹೆಚ್ಚುವರಿ ಮೌಲ್ಯ ಬಂದಿದೆ’ ಎಂದು ಸಿಬಿಯು ಮೂಲದ ತಂಡ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಕ್ಲಬ್ ಖರೀದಿ ವ್ಯವಹಾರದ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net