ಮಕ್ಕಳ ಮೊಬೈಲ್​ನಲ್ಲಿ ಅಮ್ಮನ ರಾಸಲೀಲೆ ಫೋಟೋಸ್​! ದೂರಾದ ಲವರ್​ನಿಂದ ಮಹಿಳೆಗೆ ಕಾದಿತ್ತು ಶಾಕ್​

phpoto
Published on

ಅಹಮದಾಬಾದ್​: ಅಕ್ರಮ ಸಂಬಂಧ, ಕುಟುಂಬದಲ್ಲಿ ಬೆಂಕಿ ಹಚ್ಚುತ್ತದೆ. ಅದರಲ್ಲೂ ವಯಸ್ಕ ಮಕ್ಕಳಿರುವ ತಂದೆ ತಾಯಿಗಳು ಬೆಳೆಸಿಕೊಳ್ಳುವ ಅಕ್ರಮ ಸಂಬಂಧದಿಂದ ಅವರು ತಮ್ಮ ಮಕ್ಕಳೆದುರು ಮುಜುಗರಕ್ಕೊಳಗಾಗುವಂತಹ ಸಂದರ್ಭ ಒದಗಿಬಿಡುತ್ತದೆ. ಇದೀಗ ಇಂತದ್ದೇ ಒಂದು ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ.

ಅಹಮದಾಬಾದ್​ ನಗರದಲ್ಲಿ ವಾಸಿಸುವ ಮಹಿಳೆಗೆ 15 ವರ್ಷದ ಹಿಂದೆಯೇ ಗಂಡನಿಂದ ವಿಚ್ಛೇದನವಾಗಿತ್ತು. ಗಂಡನಿಂದ ದೂರಾಗಿ ಮಕ್ಕಳೊಂದಿಗೆ ಬದುಕುತ್ತಿದ್ದ ಅವಳಿಕೆ ಒಂದೂವರೆ ವರ್ಷದ ಹಿಂದೆ ಪುರುಷನೊಬ್ಬನ ಜತೆ ಸ್ನೇಹ ಹುಟ್ಟಿದೆ. ಆ ಸ್ನೇಹ ಕೆಲವೇ ತಿಂಗಳಲ್ಲಿ ಸಂಬಂಧವಾಗಿ ಬದಲಾಗಿದೆ. ಮೂರು ತಿಂಗಳ ಕಾಲ ಅಕ್ರಮ ಸಂಬಂಧದಲ್ಲಿದ್ದ ಮಹಿಳೆ, ಮಕ್ಕಳಿಗೆ ಗೊತ್ತಾದರೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಆತನಿಂದ ದೂರಾಗಿದ್ದಾಳೆ. ಆತ ದೂರಾಗಬೇಡ ಎಂದು ಎಷ್ಟೇ ಕೇಳಿಕೊಂಡರೂ ಆಕೆ ಒಪ್ಪಿಲ್ಲ.

ನೀನು ನನ್ನಿಂದ ದೂರಾದರೆ ನಮ್ಮ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಆತ ಹೆದರಿಸಿದ್ದನಂತೆ. ಅದರೆ ಅದನ್ನು ಲೆಕ್ಕಿಸದ ಆಕೆ ಆತನೊಂದಿಗಿನ ಸಂಪರ್ಕ ಮುರಿದುಕೊಂಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆತ ಅವರಿಬ್ಬರ ಖಾಸಗಿ ಫೋಟೋಗಳನ್ನು ಮಹಿಳೆಯ ಇಬ್ಬರು ಮಕ್ಕಳಿಗೆ ವಾಟ್ಸ್​ಆ್ಯಪ್​ ಮಾಡಿದ್ದಾನೆ.

ಮಕ್ಕಳ ಫೋನಿಗೆ ಇಂತಹ ಫೋಟೋ ಬಂದಿರುವುದು ತಿಳಿದ ತಕ್ಷಣ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net