

ಇಸ್ಲಾಮಾಬಾದ್: ಮದುವೆಯಾಗುವ ವರನ ಮನೆಯವರಿಗೆ ವಧು ಮನೆಯವರು ವರದಕ್ಷಿಣೆ ಕೊಡುವ ಅನಿಷ್ಟ ಪದ್ಧತಿಯನ್ನು ಭಾರತದಲ್ಲಿ ಅನುಸರಿಸಲಾಗುತ್ತಿತ್ತು. ಆದರೆ ಆ ರೀತಿ ವರದಕ್ಷಿಣೆ ಪಡೆಯುವರರ ವಿರುದ್ಧ ಕಠಿಣ ಶಿಕ್ಷೆ ತೆಗೆದುಕೊಳ್ಳಲಾರಂಭಿಸಿದಾಗಿನಿಂದ ವರದಕ್ಷಿಣೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ನಮ್ಮಲ್ಲಿ ವರದಕ್ಷಿಣೆಯಾಗಿ ಬಂಗಾರ, ಹಣ, ಕಾರು, ಮನೆಯನ್ನು ಕೊಟ್ಟರೆ ಪಕ್ಕದ ಪಾಕಿಸ್ತಾನದಲ್ಲಿ ಬಂದೂಕನ್ನೇ ಕೊಡುತ್ತಾರಂತೆ.
ಹೌದು! ಆಶ್ಚರ್ಯವೆನಿಸಿದರೂ ಇದು ಸತ್ಯ. ವಧುವಿನ ತಾಯಿ ವರನಿಗೆ ಮದುವೆಯ ವೇದಿಕೆಯ ಮೇಲೆ ಎಕೆ-47 ಕೊಟ್ಟು ಚುಂಬಿಸುವ ವಿಡಿಯೋ ಇದಕ್ಕೆ ಸಾಕ್ಷಿ. ಇಂತದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಅನೇಕ ಪಾಕಿಸ್ತಾನಿಯರು ಇದು ನಮ್ಮಲ್ಲಿ ಕಾಮನ್ ಎಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅದಕ್ಕೆ ವಿರೋಧವಾಗಿ ಭಾರತೀಯರು ಟ್ವೀಟ್ ಮಾಡಿದ್ದು, ಇಂತಹ ಅನಿಷ್ಟ ಪದ್ಧತಿಗಳಿಂದಲೇ ಪಾಕಿಸ್ತಾನ ಭಯೋತ್ಪಾದಕರ ನಾಡಾಗಿದೆ ಎಂದು ದೂರಿದ್ದಾರೆ.
'ವರದಕ್ಷಿಣೆಯಾಗಿ ಪೂರ್ತಿ ವಿಶ್ವವನ್ನೇ ಅತ್ತೆ ಕೊಡುತ್ತಿದ್ದಾರೆ' 'ಈ ಗಿಫ್ಟ್ ವರನ ಬದಲಾಗಿ ವಧುವಿಗೆ ಕೊಡಬೇಕಿತ್ತು. ಕೌಟುಂಬಿಕ ಹಲ್ಲೆ ನಡೆದಾಗ, ಮುಲಾಜಿಲ್ಲದೆ ನಿನ್ನ ಗಂಡನ ಮೇಲೆ ಗುಂಡು ಹಾರಿಸು ಎಂದು ತಾಯಿ ಹೇಳಬೇಕಿತ್ತು' ಹೀಗೆ ಹತ್ತು ಹಲವುಗಳು ಕಾಮೆಂಟ್ಗಳು ವಿಡಿಯೋಕ್ಕೆ ಹರಿದುಬಂದಿವೆ. (ಏಜೆನ್ಸೀಸ್)