More

  ಜಾರ್ಖಂಡ್​: ಜೆಎಂಎಂ ತೊರೆದು ಬಿಜೆಪಿ ಸೇರ್ಪಡೆಯಾದ ಹೇಮಂತ್ ಸೊರೇನ್‌ ಸೊಸೆ ಸೀತಾ ಸೊರೆನ್!

  ರಾಂಚಿ: ಜೆಎಂಎಂ ಶಾಸಕಿ ಹಾಗೂ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರ ಸೊಸೆ ಜೆಎಂಎಂ ನಾಯಕಿ ಸೀತಾ ಸೊರೆನ್ ಅವರು ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಂತರ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

  ಇದನ್ನೂ ಓದಿ: ಆರ್‌ಸಿಬಿ VS ಸಿಎಸ್​ಕೆ ಮ್ಯಾಚ್ ಟಿಕೆಟ್‌ ಕೊಡಿಸಿ: ವಿನಮ್ರವಾಗಿ ಮನವಿ ಮಾಡಿದ ಟೀಂ ಇಂಡಿಯಾ ಸ್ಟಾರ್​ ಆಟಗಾರ!

  ಜೆಎಂಎಂ ನಾಯಕಿ ಸೀತಾ ಸೊರೇನ್‌ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ಜಾರ್ಖಂಡ್ ಚುನಾವಣಾ ಉಸ್ತುವಾರಿ ಲಕ್ಷ್ಮೀಕಾಂತ್ ಬಾಜಪೇಯ್ ಅವರ ಸಮ್ಮುಖದಲ್ಲಿ ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಮೂರು ಬಾರಿ ಶಾಸಕಿಯಾಗಿದ್ದ ಸೀತಾ ಸೋರೆನ್​ ಅವರ ಬಿಜೆಪಿ ಸೇರ್ಪಡೆಯಿಂದ ಆದಿವಾಸಿ ಜನರನ್ನು ಸೆಳೆಯುವ ಬಿಜೆಪಿ ತಂತ್ರಕ್ಕೆ ಶಕ್ತಿ ತುಂಬಿದಂತಾಗಿದೆ ಎಂದು ಹೇಳಲಾಗಿದೆ.

  ಸೀತಾ ಸೊರೆನ್ ಅವರನ್ನು ಕಡೆಗಣಿಸಿದ್ದರು: ಜೆಎಂಎಂ ಅಧ್ಯಕ್ಷ ಶಿಬು ಸೋರೆನ್ ಅವರ ಹಿರಿಯ ಮಗ ದುರ್ಗಾ ಸೊರೆನ್ ಸೀತಾ ಸೋರೆನ್ ಅವರನ್ನು ವಿವಾಹವಾಗಿದ್ದಾರೆ. ದುರ್ಗಾ ಸೋರೆನ್ ಅನಾರೋಗ್ಯದಿಂದ ನಿಧನರಾದ ನಂತರ ಶಿಬು ಸೊರೆನ್ ಮತ್ತು ಇತರ ಕುಟುಂಬ ಸದಸ್ಯರು ಸೀತಾ ಸೊರೆನ್ ಅವರನ್ನು ಕಡೆಗಣಿಸಿದ್ದರು ಎನ್ನಲಾಗಿದೆ. ತನ್ನ ಮಕ್ಕಳನ್ನು ಕುಟುಂಬದ ಇತರ ಸದಸ್ಯರು ಲೆಕ್ಕಿಸಿಲ್ಲ ಎಂದು ಸೀತಾ ದೂರಿದ್ದಾರೆ. ಚಿಕ್ಕಪ್ಪ ಶಿಬು ಸೊರೆನ್‌ಗೆ ಬರೆದ ಪತ್ರದಲ್ಲಿ ಸೀತಾ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ.

  ಕುಟುಂಬದಲ್ಲಿ ಮಾತ್ರವಲ್ಲದೆ ಪಕ್ಷದಲ್ಲಿಯೂ ಅವರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಸದ್ಯದ ಬೆಳವಣಿಗೆಗಳಿಂದ ಬೇಸತ್ತಿದ್ದಾರೆ. ಪಕ್ಷ ತನ್ನ ಮೂಲ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಅವರ ಹಾಗೂ ಅವರ ಕುಟುಂಬದ ವಿರುದ್ಧ ಪಕ್ಷದಲ್ಲಿ ಷಡ್ಯಂತ್ರ ನಡೆಯುತ್ತಿದೆ. ಈ ಪರಿಸ್ಥಿತಿಯಲ್ಲಿ ರಾಜೀನಾಮೆ ನೀಡದೆ ಬೇರೆ ದಾರಿಯಿಲ್ಲ ಎಂದು ಸೀತಾ ಸೊರೆನ್ ರಾಜೀನಾಮೆ ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ.

  ಮುಕೇಶ್ ಅಂಬಾನಿ ಮಗನ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಶಾರುಖ್-ಸಲ್ಮಾನ್ ಕಿತ್ತಾಟ: ಅಮೀರ್ ಖಾನ್ ಬಿಚ್ಚಿಟ್ಟ ರಹಸ್ಯ

  See also  ಮೂರೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ; ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts