More

    ‘ನೀನ್ಯಾಕೆ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲ!’; ಬಿಗ್​ಬಾಸ್​ನ ಬೋಲ್ಡ್ ಸ್ಪರ್ಧಿಗೆ ನೆಟ್ಟಿಗರ ಪ್ರಶ್ನೆ…

    ಟ್ರೋಲ್​ ಅಂದ ತಕ್ಷಣ ಅಲ್ಲಿ ಸೆಲೆಬ್ರಿಟಿಗಳ ಕಾಲೆಳೆಯುವ ಕೆಲಸ ಆಗಿರುತ್ತದೆ. ಸೆಲೆಬ್ರಿಟಿಗಳ ಸೋಷಿಯಲ್​ ಮೀಡಿಯಾದಲ್ಲಿನ ಪೋಸ್ಟ್ ವಿಚಾರವಾಗಿಯೋ, ಅವರಾಡಿದ ಮಾತನ್ನು ಇಟ್ಟುಕೊಂಡೋ ಅಥವಾ ಅವರು ಧರಿಸುವ ಉಡುಪಿನಿಂದಲೋ ಟ್ರೋಲ್​ ಮಾಡಲಾಗುತ್ತದೆ. ಒಟ್ಟಿನಲ್ಲಿ ನೇರವಾಗಿ ಅಲ್ಲದಿದ್ದರೂ, ಕಮೆಂಟ್​ ಮಾಡುವ ಮೂಲಕ ಕೆಣಕುವುದಾಗಿರುತ್ತದೆ. ಇಲ್ಲೊಬ್ಬ ಮಾಡೆಲ್​ಗೆ ಅದ್ಯಾವ ಮಟ್ಟಿಗೆ ಕಾಟ ಕೊಡಲಾಗಿದೆ ಎಂದರೆ, ‘ನೀನ್ಯಾಕೆ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲ’ ಎಂದು ಕಮೆಂಟ್​ ಮಾಡುವ ಮೂಲಕ ಕಾಲೆಳೆದಿದ್ದಾರೆ.

    ಇದನ್ನೂ ಓದಿ: ಟ್ರೋಲ್​ಗೆ ಹೆದರಿ ಕಣ್ಣೀರಲ್ಲೇ ಕೈತೊಳೆಯುತ್ತಿದ್ದಾರೆ ಕರಣ್​!

    ಹೌದು, ಹಿಂದಿ ಬಿಗ್​ಬಾಸ್​ನ ಮಾಜಿ ಸ್ಪರ್ಧಿ ಬೆನಫ್ಶಾ ಸೋನಾವಲ್ಲಾ ಟ್ರೋಲ್​ಗೆ ಒಳಗಾದವರು. ಸೋಷಿಯಲ್​ ಮೀಡಿಯಾದಲ್ಲಿ ಸದಾ ಬೋಲ್ಡ್ ರೀತಿಯಲ್ಲಿರುವ ಫೋಟೋಗಳನ್ನು ಪೋಸ್ಟ್​ ಮಾಡಿಕೊಳ್ಳುವ ಬೆನಫ್ಶಾ, ಆಗಾಗ ನೆಟ್ಟಿಗರ ಕೆಂಗೆಣ್ಣಿಗೆ ಗುರಿಯಾಗಿ ಟ್ರೋಲ್​ಗೆ ಒಳಗಾಗುತ್ತಿರುತ್ತಾರೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ಇನ್​ಸ್ಟಾಗ್ರಾಂನಲ್ಲಿ ಹಾಕಿದ ಫೋಟೋವೊಂದಕ್ಕೆ ನೆಟ್ಟಿಗನೊಬ್ಬ ‘ನೀನ್ಯಾಕೆ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲ’ ಎಂದು ಫೋಟೋಕ್ಕೆ ಕಮೆಂಟಿಸಿದ್ದಾನೆ.

    ‘ನೀನ್ಯಾಕೆ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲ!’; ಬಿಗ್​ಬಾಸ್​ನ ಬೋಲ್ಡ್ ಸ್ಪರ್ಧಿಗೆ ನೆಟ್ಟಿಗರ ಪ್ರಶ್ನೆ...

    ಇದನ್ನೂ ಓದಿ: ಕಿಚ್ಚ ಸುದೀಪ್​ ಶೇರ್​ ಮಾಡಿದ್ದಾರೊಂದು ಅಪರೂಪದ ಫೋಟೋ!

    ಹೀಗೆ ಕಮೆಂಟ್​ ಬಂದಿದ್ದೇ ತಡ ಕೆಂಡಾಮಂಡಲವಾದ ಬೆನಫ್ಶ, ಅದಕ್ಕೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ‘ಈ ನಿನ್ನ ಕಮೆಂಟ್​ಅನ್ನು ಈಗಲೇ ಸೈಬರ್​ ಕ್ರೈಂ ವಿಭಾಗಕ್ಕೆ ತಲುಪಿಸಿ ತಕ್ಕ ಶಾಸ್ತಿ ಮಾಡಿಸುತ್ತೇನೆ’ ಎಂದಿದ್ದಾರೆ. ಕೂಡಲೇ ಸೈಬರ್​ ಕ್ರೈಂ ಹೆಲ್ಪ್​ಲೈನ್​ಗೆ ಟ್ಯಾಗ್​ ಮಾಡಿ, ಈತನ ಕಮೆಂಟ್​ ರವಾನಿಸಿದ್ದಾರೆ. ‘ಈ ರೀತಿ ಮಾಡಿದ್ದು ನನಗೋಸ್ಕರ ಅಲ್ಲ. ಇಂಥ ಕಮೆಂಟ್​ಗಳಿಗೆ ಹೆದರುವವಳು ನಾನಲ್ಲ. ಬದಲಿಗೆ ಈ ರೀತಿ ಕಮೆಂಟ್​ ಮಾಡುವ ಮುನ್ನ ನೂರು ಬಾರಿ ವಿಚಾರ ಮಾಡಿ ಕಮೆಂಟ್​ ಮಾಡಲಿ ಎಂಬ ಕಾರಣಕ್ಕೆ’ ಎಂದು ತಮ್ಮ ಉದ್ದೇಶವನ್ನು ತಿಳಿಸಿದ್ದಾರೆ. (ಏಜೆನ್ಸೀಸ್​)

    https://www.instagram.com/p/CB-hYZ2BKh-/

    ಭೋಜಪುರಿ ಹಾಡಿನಲ್ಲಿ ಅವಾಚ್ಯ ಪದಗಳಿಂದ ಸಲ್ಮಾನ್​ಗೆ ನಿಂದನೆ!; ಸಾಂಗ್​ ವೈರಲ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts