

ಕಿಚ್ಚ ಸುದೀಪ್ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಾಗಿ ಕಾದು ಕುಳಿತವರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಅಭಿಮಾನಿ ಪೇಜ್ಗಳಿವೆ. ನಿತ್ಯ ಅವರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ ಸುದೀಪ್. ಜನ್ಮದಿನದ ಶುಭಾಶಯವೋ ಅಥವಾ ಉಭಯಕುಶಲೋಪರಿಯೋ ಒಟ್ಟಿನಲ್ಲಿ ಅಭಿಮಾನಿಗಳ ಪ್ರಶ್ನೆಗಗಳಿಗೆ ಉತ್ತರಿಸುತ್ತಿರುತ್ತಾರೆ. ಹೀಗಿರುವಾಗಲೇ ಅಭಿಮಾನಿಯೊಬ್ಬ ಸುದೀಪ್ ಅವರ ವಿಶೇಷ ಫೋಟೋವೊಂದನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದರು. ಅದೇ ಫೋಟೋ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದ್ಯಾವ ಮಟ್ಟಿಗೆ ಅಂದರೆಮ ಸ್ವತಃ ಸುದೀಪ್ ಆ ಫೋಟೋ ಮೆಚ್ಚಿಕೊಂಡು , ಅದನ್ನು ಸೃಷ್ಟಿಸಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಸುದೀಪ್ ಬಾಲ್ಯದ ಫೋಟೋ ಮತ್ತು ಪ್ರಸ್ತುತ ಈಗಿನ ಅವರ ಫೋಟೋವನ್ನು ಒಂದೇ ಫ್ರೇಮ್ನಲ್ಲಿ ತೋರಿಸಲಾಗಿದೆ. ಬಾಲ್ಯದ ಸುದೀಪ್ ಹೆಗಲ ಮೇಲೆ ಈಗೀನ ಸುದೀಪ್ ಕೈ ಹಾಕಿ ಪೋಸ್ ಕೊಟ್ಟ ಭಂಗಿಯಲ್ಲಿ ಫೋಟೋವನ್ನು ಎಡಿಟ್ ಮಾಡಲಾಗಿದೆ. ‘ಯಾರೊ ಒಬ್ಬರು ಈ ಫೋಟೋ ಮಾಡಿ ಕಳುಹಿಸಿದ್ದಾರೆ. ನಿಜಕ್ಕೂ ಇದು ವಾವ್.. ಎನಿಸುವಂತಿದೆ. ಏನಾದರಾಗಲಿ ನಿಮಗೆ ತುಂಬು ಹೃದಯದ ಧನ್ಯವಾದಗಳು’ ಎಂದಿದ್ದಾರೆ ಸುದೀಪ್.
ಸದ್ಯ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕಿಚ್ಚನ ಅಭಿಮಾನಿಗಳು ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಕಾರ್ತಿಕ್ ಕೆಎಲ್ ಎಂಬುವವರೂ ಈ ಫೋಟೋವನ್ನು ಎಡಿಟ್ ಮಾಡಿದ್ದು, ಸುದೀಪ್ ಅದನ್ನು ಹಂಚಿಕೊಂಡಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಕಾರ್ತಿಕ್ ಕೆಲಸಕ್ಕೆ ಇನ್ನುಳಿದ ಅಭಿಮಾನಿಗಳು ಬೆನ್ನುತಟ್ಟುತ್ತಿದ್ದಾರೆ.