ನಡುರಸ್ತೆಯಲ್ಲಿ ನಾಯಿಗೆ ಬೆಂಕಿ ಹಚ್ಚಿದ ದುಷ್ಟ: ಸಿಸಿಟಿವಿಯಲ್ಲಿ ಆಘಾತಕಾರಿ ದೃಶ್ಯ ಸೆರೆ! Pit bull

untitled-design-25-68873447be678
Published on

Pit bull: ನ್ಯೂಯಾರ್ಕ್​ ನಗರದ ಕ್ವೀನ್ಸ್​ನಲ್ಲಿ ವ್ಯಕ್ತಿಯೊಬ್ಬ ನಾಯಿಯನ್ನು ರಸ್ತೆಯುದ್ದಕ್ಕೂ ಎಳೆದುಕೊಂಡು ಹೋಗಿ, ಬೆಂಕಿಹಚ್ಚಿ ಕ್ರೂರವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ದೃಶ್ಯ ಅಲ್ಲಿನ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರಿ ಆಕ್ರೋಶಕ್ಕೆ ಗುರಿಯಾಗಿದೆ.

ವಿಡಿಯೋದಲ್ಲೇನಿದೆ?

ಗುರುವಾರ (ಜುಲೈ 24) ಬೆಳಗ್ಗೆ ವ್ಯಕ್ತಿಯೊಬ್ಬ 5 ಗಂಟೆ ಸುಮಾರಿಗೆ ಸೌತ್​ ಓಝೋನ್​ ಪಾರ್ಕ್​ನ 128 ನೇ ಬೀದಿ ಮತ್ತು 116ನೇ ಅವೆನ್ಯೂದ ಮೂಲೆಯಲ್ಲಿ ನಾಯಿಯನ್ನು ಎಳೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ನಾಯಿ ಮೇಲೆ ಸುಡುವ ದ್ರವ್ಯವನ್ನು ಸುರಿದು ಬೆಂಕಿ ಹಚ್ಚುತ್ತಾನೆ. ನಂತರ ಆ ಪ್ರಾಣಿಯನ್ನು ಅಲ್ಲಿಯೇ ಬಿಟ್ಟು ಆತ ಓಡಿ ಹೋಗುತ್ತಾನೆ.

ಪೊಲೀಸರ ಮಾಹಿತಿ ಪ್ರಕಾರ, ನೆರೆಹೊರೆಯವರಿಗೆ ಆ ವ್ಯಕ್ತಿಯಾಗಲಿ ಅಥವಾ ನಾಯಿಯ ಮಾಲೀಕರಾಗಲಿ ಯಾರೆಂಬುದು ತಿಳಿದಿಲ್ಲ. ಸದ್ಯ ನಾಯಿಯನ್ನು ಎಳೆದುಕೊಂಡು ಸಾಯಿಸಿರುವ ವಿಡಿಯೋ ವೈರಲ್​ ಆಗಿದೆ ಎಂದು ತಿಳಿಸಿದ್ದಾರೆ.

ನಾಯಿಯ ಸಾವಿನ ಬಗ್ಗೆ ಎನ್​​ವೈಪಿಡಿ ಪ್ರಾಣಿ ಕ್ರೌರ್ಯ ದಳ ತನಿಖೆ ನಡೆಸುತ್ತಿದೆ. ಶವ ಪರೀಕ್ಷೆ ನಡೆಸುವ ಮೂಲಕ ಸಂಸ್ಥೆಯು ಅಲ್ಲಿನ ಪೋಲಿಸರಿಗೆ ಬೆಂಬಲ ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

ಯಾವಾಗ ವಿಡಿಯೋ ವೈರಲ್​ ಆಯಿತೋ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಭುಗಿಲೆದ್ದಿದೆ. ಅನೇಕ ನೆಟ್ಟಿಗರು ಕಾಮೆಂಟ್​ಗಳ ಸುರಿಮಳೆಗೈದಿದ್ದು, ನಾಯಿ ಕೊಂದ ದುಷ್ಟನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. Panda Tsar ಹೆಸರಿನ ಬಳಕೆದಾರನೊಬ್ಬ ಪ್ರತಿಕ್ರಿಯಿಸಿ, ಪೊಲೀಸರನ್ನು ಮರೆತು ಬಿಡಿ, ಮೊದಲು ಆ ದುರುಳನನ್ನು ಹುಡುಕಿ ನಾಯಿಗೆ ಮಾಡಿದಂತೆ ಆತನಿಗೂ ಮಾಡಿ ಎಂದು ಬರೆದುಕೊಂಡಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net