ಮುಖದ ಅಂದವನ್ನು ಹೆಚ್ಚಿಸಲು ಈ ರೀತಿಯ ರೋಲರ್​ ಬಳಸಿ! Skin

untitled-design-23-68870b53d3de4
Published on

Skin : ಇತ್ತೀಚಿನ ದಿನಗಳಲ್ಲಿ ಚರ್ಮದ ಆರೈಕೆ ಮಾಡಿಕೊಳ್ಳುವುದು ಒಂದು ಟ್ರೆಂಡ್​ ಆಗಿದೆ. ಅದೇ ರೀತಿಯಲ್ಲಿ ಅನೇಕರು ತಮ್ಮ ಚರ್ಮ ಹೊಳಪಾಗಿರಬೇಕೆಂದು ಸಿರಮ್​, ಮಾಯಿಶ್ಚರೈಸರ್ ಹಾಗೂ ಫೇಸ್​ಪ್ಯಾಕ್​ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಟ್ರೆಂಡ್​ಗೆ ತಕ್ಕಂತೆ ನಿಮ್ಮ ಚರ್ಮದ ಸೌಂದರ್ಯವನ್ನು ಇನ್ನಷ್ಟು ಉತ್ತಮಗೊಳಿಸಲು ನೀವು ಬಯಸಿದ್ದಲ್ಲಿ ಈ ರೀತಿಯ ರೋಲರ್​ಗಳು ನಿಮಗೆ ಸಹಾಯ ಮಾಡುತ್ತದೆ.

ಜೇಡ್ ರೋಲರ್

ಫೇಸ್ ರೋಲರ್ ಎಂದೂ ಕರೆಯಲ್ಪಡುವ ಜೇಡ್ ರೋಲರ್ ಚರ್ಮದ ವಿನ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮೊದಲು ನೀವು ಮುಖಕ್ಕೆ ಫೇಸ್​ ಸಿರಮ್​ ಅಥವಾ ಮಾಯಿಶ್ಚರೈಸರ್ ಹಚ್ಚಿ, ಈ ಜೇಡ್​ ರೋಲರ್​ನಿಂದ ಐದರಿಂದ ಏಳು ನಿಮಿಷಗಳವರೆಗೆ ಮಸಾಜ್​ ಮಾಡಬೇಕು. ಇದು ರಕ್ತ ಪರಿಚಲನೆ ಸುಧಾರಿಸಿ, ಮುಖದ ಮೆಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.

ಗುವಾ-ಶಾ ಕಲ್ಲು

ಗುವಾ-ಶಾ ಕಲ್ಲು ಇದು ಗುಲಾಬಿ ಸ್ಪಟಿಕ ಶಿಲೆ ಅಥವಾ ಜೇಡ್​ನಿಂದ ಮಾಡಿದ ಚಪ್ಪಟೆ ಕಲ್ಲು. ಇದನ್ನು ಬಳಸಲು, ನೀವು ಮೊದಲು ನಿಮ್ಮ ಮುಖಕ್ಕೆ ಫೇಸ್​ ಸಿರಮ್​ ಅಥವಾ ಮಾಯಿಶ್ಚರೈಸರ್ ಹಚ್ಚಿ, ನಂತರ ಐದರಿಂದ ಹತ್ತು ನಿಮಿಷಗಳವರೆಗೆ ಮಸಾಜ್​ ಮಾಡಿ. ಇದು ಮುಖದ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಾಲಜನ್ ರೋಲರ್

ಚರ್ಮದ ಆರೋಗ್ಯವನ್ನು ಸುಧಾರಿಸಲು ಕಾಲಜನ್ ರೋಲರ್‌ಗಳನ್ನು ಬಳಸಬಹುದು. ಕಾಲಜನ್​ ಇದು ಒಂದು ಚರ್ಮವನ್ನು ಸರಿಪಡಿಸುವಂತಹ ಪ್ರೋಟೀನ್​ ಆಗಿದ್ದು, ಇದನ್ನು ಬಳಸುವ ಮುಂಚೆ, ಮುಖಕ್ಕೆ ಫೇಸ್​ ಸಿರಮ್​ ಅಥವಾ ಮಾಯಿಶ್ಚರೈಸರ್ ಹಚ್ಚಿ, ನಂತರ ರೋಲರ್​ನಿಂದ ಮುಖವನ್ನು ಮೇಲ್ಮುಖವಾಗಿ ಮಸಾಜ್​ ಮಾಡಬೇಕು. ಇದು ಚರ್ಮದ ಕೋಶಗಳನ್ನು ಸಕ್ರಿಯಗೊಳಿಸುತ್ತದೆ. ಹಾಗೆಯೇ ಕಾಲಜನ್​ ರೋಲರ್​ ಮುಖದ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net