ಅನುಚಿತವಾಗಿ ಯಾರೇ ವರ್ತಿಸಿದರು ಸಹಿಸುವುದಿಲ್ಲ; ಇಶಾ ಡಿಯೋಲ್​​

ಮುಂಬೈ: ಡ್ರೀಮ್​ ಗರ್ಲ್​​ ಹೇಮಾಮಾಲಿನಿ ಮತ್ತು ಧರ್ಮೇಂದರ ಅವರು ಮಗಳು ಇಶಾ ಡಿಯೋಲ್​​ ಬಗ್ಗೆ ಪ್ರತ್ಯೇಕ ಪರಿಚಯದ ಅಗತ್ಯವಿಲ್ಲ. ಸ್ಟಾರ್​​ ದಂಪತಿ ಪುತ್ರಿಯಾದರು ಸಿನಿಮಾ ರಂಗದಲ್ಲಿ ತಮ್ಮ ಕಠಿಣ ಪರಿಶ್ರಮ ಮತ್ತು ಹೋರಾಟದಿಂದ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ. ಇತ್ತೀಚೆಗೆ ಇಶಾ ಡಿಯೋಲ್​​ ಈವ್​-ಟೀಸ್​ ಬಗ್ಗೆ ಮಾತನಾಡಿದ್ದು, ಇಂತಹ ಕೃತ್ಯಗಳನ್ನು ಮಹಿಳೆಯರು ನಿರ್ಲಕ್ಷಿಸಬಾರದು. ಅದರ ವಿರುದ್ಧ ಧ್ವನಿ ಎತ್ತಬೇಕೆಂದು ಹೇಳಿದರು.

ಇದನ್ನು ಓದಿ: ಕಿಂಗ್​ಕೊಯ್ಲಿ ಜತೆ ರಾಧಿಕಾ ಶರತ್​ಕುಮಾರ್​ ಸೆಲ್ಫಿ; ಪೋಟೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..

ಇತ್ತೀಚಿನ ಸಂದರ್ಶನವೊಂದರಲ್ಲಿ ತಾನು ಈವ್​-ಟೀಸ್​ ಮಾಡಿದ್ದೇನೆ ಎಂದು ಇಶಾ ಡಿಯೋಲ್ ಬಹಿರಂಗಪಡಿಸಿದ್ದಾರೆ. ಘಟನೆ ನೆನಪಿಸಿಕೊಂಡ ನಟಿ ಇದು ಪುಣೆಯಲ್ಲಿ ಸಂಜಯ್ ದತ್, ಸುನೀಲ್ ಶೆಟ್ಟಿ, ಜಾಯೇದ್ ಖಾನ್ ಮತ್ತು ಅಭಿಷೇಕ್ ಬಚ್ಚನ್ ಇರುವ ದಸ್ ಸಿನಿಮಾದ ಪ್ರೀಮಿಯರ್ ಈವೆಂಟ್‌ನಲ್ಲಿ ಸಂಭವಿಸಿತು.

ಪ್ರೀಮಿಯರ್​​ ಶೋಗೆ ನಾವು ಗುಂಪಿನ ಮಧ್ಯೆ ಹೋಗುತ್ತಿದ್ದೇವು. ನಾನು ಪ್ರವೇಶಿಸಿದಾಗ ಎಲ್ಲಾ ಕಲಾವಿದರು ಒಬ್ಬೊಬ್ಬರಾಗಿ ಪ್ರವೇಶಿಸುತ್ತಿದ್ದರು. ನನ್ನ ಸುತ್ತಲೂ ಅನೇಕ ದೊಡ್ಡ ಮತ್ತು ಬಲವಾದ ಬೌನ್ಸರ್‌ಗಳಿದ್ದರು. ಅದರ ಹೊರತಾಗಿಯೂ ಗುಂಪಿನಿಂದ ಒಬ್ಬ ವ್ಯಕ್ತಿ ನನ್ನನ್ನು ಅನುಚಿತವಾಗಿ ಮುಟ್ಟಿದನು. ನನಗೆ ಏನೋ ಕೆಟ್ಟ ಅನುಭವ ಸಂಭವಿಸಿದಂತೆ ಆಯಿತು. ತಕ್ಷಣ ನಾನು ಆ ವ್ಯಕ್ತಿಯ ಕೈಯನ್ನು ಹಿಡಿದು ಜನಸಂದಣಿಯಿಂದ ಹೊರಗೆ ಕರೆದೊಯ್ದು ಕಪಾಳಮೋಕ್ಷ ಮಾಡಿದೆ ಎಂದು ಹೇಳಿದರು.

ನಾನು ಕೋಪ ಇರುವ ಸ್ವಭಾವದ ವ್ಯಕ್ತಿಯಲ್ಲ. ಆದರೆ ಯಾರಾದರೂ ನನ್ನ ಸಹನೆಯ ಮಟ್ಟವನ್ನು ಮೀರಿ ಏನಾದರೂ ಮಾಡಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಅಲ್ಲದೆ ಇಂಥಾ ಸಂದರ್ಭಗಳಲ್ಲಿ ಮಹಿಳೆ ಖಂಡಿತವಾಗಿಯೂ ಪ್ರತಿಕ್ರಿಯಿಸಬೇಕು. ಪುರುಷರು ದೈಹಿಕವಾಗಿ ಬಲಶಾಲಿಯಾಗಿರುವುದರಿಂದ ಅವರು ಅದರ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಮಹಿಳೆಯರು ಭಾವನಾತ್ಮಕವಾಗಿ ಬಲಶಾಲಿಗಳು ಎಂದು ನಾನು ನಂಬುತ್ತೇನೆ ಎಂದು ತಿಳಿಸಿದರು.

ಇಶಾ ಡಿಯೋಲ್ ಅವರು ಕೋಯಿ ಮೇರೆ ದಿಲ್ ಸೇ ಪೂಛೆ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಕುಚ್ ತೋ ಹೈ, ಯುವಾ, ಧೂಮ್, ಕಾಲ್, ಶಾದಿ ನಂ.1, ನೋಎಂಟ್ರಿ, ಜಸ್ಟ್ ಮ್ಯಾರೀಡ್, ಹೈಜಾಕ್​, ಹಲವು ಸಿನಿಮಾಗಳ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​​​)

ನನ್ನ ಈ ವರ್ತನೆಯಿಂದ ಅಭಿಮಾನಿಗಳಿಗೆ ಬೇಸರವಾಗಿಬಹುದು; ಕ್ಷಮಿಸಿ ಎಂದಿದ್ದೇಕೆ ರವೀನಾ ಟಂಡನ್​​

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…