

ಕೊಕ್ಕರ್ಣೆ: ನಾಲ್ಕೂರು ಗ್ರಾಪಂ ಸಭಾಂಗಣದಲ್ಲಿ (ಪಿಎಂಕೆಎಸ್‌ವೈ-ಡಬ್ಲುೃಡಿಸಿ 2.0) ಸ್ವಸಹಾಯ ಸಂಘ ಸದಸ್ಯರಿಗೆ 15 ದಿನಗಳ ಕೌಶಲಾಧಾರಿತ ಉದ್ಯಮಶೀಲತಾ ಟೈಲರಿಂಗ್ ಹಾಗೂ ಕಸೂತಿ ತರಬೇತಿ ನಡೆಯಿತು.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಕೃಷಿ ಇಲಾಖೆ, ನಾಲ್ಕೂರು ಗ್ರಾಪಂ, ಬ್ರಹ್ಮಾವರ, ರೋಟರಿ ಕ್ಲಬ್ ಕೊಕ್ಕರ್ಣೆ ಆಶ್ರಯದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿ ಕಾರ್ಯಕ್ರಮದಡಿ ನಾಲ್ಕೂರು ಗ್ರಾಪಂ ಅಧ್ಯಕ್ಷೆ ಪ್ರತಿಮಾ ರವಿಚಂದ್ರ ಆಚಾರ್ ಉದ್ಘಾಟಿಸಿದರು.
ರೋಟರಿ ಕ್ಲಬ್ ಕೊಕ್ಕರ್ಣೆ ಸ್ಥಾಪಕಾಧ್ಯಕ್ಷ ಪ್ರಸಾದ್ ಹೆಗ್ಡೆ ಮಾರಾಳಿ, ಅಧ್ಯಕ್ಷ ಕಾಶೀನಾಥ್ ಶೆಣೈ ಕಜ್ಕೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೀತಾರಾಮ ಆಚಾರ್ಯ, ಬಿವಿಟಿ ಉಪನ್ಯಾಸಕ ಸುರೇಂದ್ರ ಆಚಾರ್ಯ, ಸಿಡಾಕ್ ಸಂಸ್ಥೆ ಜಿಲ್ಲಾ ವ್ಯವಸ್ಥಾಪಕ ಪ್ರಥ್ವಿರಾಜ್ ಎಂ.ನಾಯಕ್, ಕೃಷಿ ಇಲಾಖೆ ಜಲಾನಯನ ಸಹಾಯಕ ಸುರೇಶ್ ನಾಯ್ಕ, ರೋಟರಿ ಸದಸ್ಯರು, ಗ್ರಾಮಸ್ಥರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ರೋಟರಿ ಸದಸ್ಯ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.