ಪಡುಬಿದ್ರಿ ವೃತ್ತಮಟ್ಟದ ಖೋಖೋ

kemundelu
ಕೆಮುಂಡೇಲು ಶಾಲಾ ಮೈದಾನದಲ್ಲಿ ಪಡುಬಿದ್ರಿ ವೃತ್ತಮಟ್ಟದ ಖೋಖೋ ಟೂರ್ನಿಯನ್ನು ರವಿರಾಜ್ ರಾವ್ ಉದ್ಘಾಟಿಸಿದರು
Published on

ಪಡುಬಿದ್ರಿ: ಉಡುಪಿ ಜಿಪಂ ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ ಎಲ್ಲೂರು ಕೆಮುಂಡೇಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಕೆಮುಂಡೇಲು ಶಾಲಾ ಮೈದಾನದಲ್ಲಿ ಬುಧವಾರ ಪಡುಬಿದ್ರಿ ವೃತ್ತಮಟ್ಟದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಖೋಖೋ ಪಂದ್ಯಾಟವನ್ನು ಎಲ್ಲೂರು ಗ್ರಾಪಂ ಅಧ್ಯಕ್ಷ ರವಿರಾಜ್ ರಾವ್ ಉದ್ಘಾಟಿಸಿದರು.

ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷೆ ಶ್ಯಾಮಲಾ ನಾಗರತ್ನ ರಾವ್, ನಿವೃತ್ತ ಪ್ರಾಂಶುಪಾಲ ವೈ.ಸುದರ್ಶನ್ ರಾವ್, ಕೃಷ್ಣಾನಂದ ರಾವ್, ಚಂದ್ರಶೇಖರ ಶೆಟ್ಟಿಗಾರ್, ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ರಿತೇಶ್ ಶೆಟ್ಟಿ ಸೂಡ, ಎಸ್‌ಡಿಎಂಸಿ ಅಧ್ಯಕ್ಷೆ ಶಾಂತಿ ಎಸ್, ಗ್ರಾಪಂ ಸದಸ್ಯರಾದ ಶೋಭಾ ಶೆಟ್ಟಿ, ದಯಾನಂದ ಶೆಟ್ಟಿಗಾರ್, ಹರೀಶ್ ಮೂಲ್ಯ, ಮುಖ್ಯ ಶಿಕ್ಷಕ ಜಗನ್ನಾಥ್ ಶೆಟ್ಟಿ ಉಪಸ್ಥಿತರಿದ್ದರು. ಕಾಪು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ಚಂದ್ರಹಾಸ ಪ್ರಭು ಮುದರಂಗಡಿ ಸ್ವಾಗತಿಸಿದರು. ಶಿಕ್ಷಕಿ ಸುನೀತಾ ನಿರೂಪಿಸಿದರು. ಸುಕೇತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net