ಮಳೆ ನಡುವೆಯೇ ಶವಸಂಸ್ಕಾರ : ರುದ್ರಭೂಮಿ ಪುನಃ ನವೀಕರಣ ವಿಳಂಬ ; ಶೀಘ್ರ ಕಾಮಗಾರಿಗೆ ಸ್ಥಳೀಯರ ಆಗ್ರಹ

shava
rudrabhoomi
Published on

ವಿಜಯವಾಣಿ ಸುದ್ದಿಜಾಲ ಕೋಟ
ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಹಿಂದು ರುದ್ರಭೂಮಿ ಪುನಃ ನವೀಕರಣಗೊಳ್ಳುತ್ತಿದ್ದು, ಕಾಮಗಾರಿ ವಿಳಂಬದ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಮುತುವರ್ಜಿಯಲ್ಲಿ ಹಿಂದು ಧಾರ್ಮಿಕ ದತ್ತಿ ಇಲಾಖೆ ಅನುದಾನದಡಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಪುನಃ ನವೀಕರಣಗೊಳ್ಳುವ ರುದ್ರಭೂಮಿ ಕೋಟತಟ್ಟು ಗ್ರಾಪಂ ವಿಶೇಷ ಮುತುವರ್ಜಿಯಲಿ ್ಲಇತ್ತೀಚೆಗೆ ಕಾಮಗಾರಿ ಕೈಗೆತ್ತಿಕೊಂಡಿದೆ. ಆದರೆ ವಿಪರೀತ ಮಳೆ ಹಿನ್ನೆಲೆಯಲ್ಲಿ ಕಾಮಗಾರಿಗೆ ಅಡಚಣೆಯಾಗಿದೆ.

ಅಲ್ಲದೆ ಪಕ್ಕದ ಸ್ಥಳದಲ್ಲಿ ತಾತ್ಕಾಲಿಕ ತಗಡಿನ ಚಪ್ಪರ ಸಿದ್ಧಪಡಿಸಿದ್ದಾದರೂ ಭಾರಿ ಗಾಳಿ ಮಳೆ ಪ್ರಭಾವದಿಂದ ಹಾನಿಗೊಂಡಿದೆ. ಒಟ್ಟಿನಲ್ಲಿ ಸ್ಥಳೀಯರಿಗೆ ಶವಸಂಸ್ಕಾರ ನೆರವೇರಿಸಲು ಕ್ಲಿಷ್ಟಕರ ಸನ್ನಿವೇಶ ಎದುರಾಗಿದೆ. ಈ ಬಗ್ಗೆ ಗ್ರಾಮಸ್ಥರು ಸ್ಥಳೀಯ ಕೋಟತಟ್ಟು ಗ್ರಾಪಂ ತೆರಳಿ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಮನವಿ ಮಾಡಿದ್ದಾರೆ.

ನಮ್ಮ ಗ್ರಾಮದ ವ್ಯಾಪ್ತಿಯ ಹಿಂದು ರುದ್ರಭೂಮಿ ಹೊಸ ಆಯಾಮ ನೀಡಲು ಕಾರ್ಯೋನ್ಮುಖವಾಗಿದ್ದು, ಈಗಾಗಲೇ ಕಾಮಗಾರಿ ಆರಂಭಗೊಂಡಿದೆ. ಮಳೆ ಪ್ರಭಾವದ ಹಿನ್ನೆಲೆಯಲ್ಲಿ ಕಾಮಗಾರಿ ಸ್ವಲ್ಪ ಅಡಚಣೆಯಾಗಿ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ಸುಂದರ ರುದ್ರಭೂಮಿ ಸಾರ್ವಜನಿಕ ಸೇವೆಗೆ ದೊರಕಲಿದೆ. -ಸತೀಶ್ ಕುಂದರ್,ಅಧ್ಯಕ್ಷರು ಕೋಟತಟ್ಟು ಗ್ರಾಪಂ

-ಸತೀಶ್ ಕುಂದರ್,ಅಧ್ಯಕ್ಷರು ಕೋಟತಟ್ಟು ಗ್ರಾಪಂ

ಕೋಟ ಹಾಗೂ ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಶವಸಂಸ್ಕಾರ ನೆರವೇರಿಸಲು ಅವಶ್ಯವಾಗಿರುವ ಈ ಹಿಂದು ರುದ್ರಭೂಮಿ ಕಾಮಗಾರಿ ವಿಳಂಬವಾಗಿದೆ. ಶವಸಂಸ್ಕಾರ ಮಳೆಯಲ್ಲಿ ನೆರವೇರಿಸಬೇಕಾದ ಸ್ಥಿತಿ ಸೃಷ್ಟಿಯಾಗಿದೆ. ಈ ಬಗ್ಗೆ ಸಂಬಂಧಿಸಿದ ಸ್ಥಳೀಯಾಡಳಿತ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸುತ್ತಿದ್ದೇವೆ. -ಜೀವನ್ ಪೂಜಾರಿ, ಕದ್ರಿಕಟ್ಟು ಕೋಟ ಸ್ಥಳೀಯ ನಿವಾಸಿ

-ಜೀವನ್ ಪೂಜಾರಿ, ಕದ್ರಿಕಟ್ಟು ಕೋಟ ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net