ಚಾಟ್​ಜಿಪಿಟಿಗೆ ಸೆಡ್ಡುಹೊಡೆಯಲು ಬಂತು ಎಲೋನ್​ ಮಸ್ಕ್​ನ 'ಗೋರ್ಕ್'!

Untitled design - 2023-11-04T231401.177
Published on

ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲೋನ್ ಮಸ್ಕ್‌ ಒಡೆತನದ xAI ನಿಂದ 'ಗೋರ್ಕ್' ಚಾಟ್​ಜಿಪಿಟಿಗೆ ಸೆಡ್ಡುಹೊಡೆಯಲು ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ. ಇಂದು ತಮ್ಮ ಪ್ರಥಮ ಎಐ ಉತ್ಪನ್ನವನ್ನು ಬಿಡುಗಡೆಗೊಳಿಸಿದ ಮಸ್ಕ್​ ಈ ಕುರಿತಂತೆ ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು, ಸುದ್ದಿಯಾಗುತ್ತಿರುವ ಗೋರ್ಕ್ ಇತರ ಕೃತಕ ಬುದ್ದಿಮತ್ತೇ ಉತ್ಪನ್ನಗಳಿಗಿಂತಲೂ ಭಿನ್ನ ಹಾಗೂ ವಿಶಿಷ್ಟವಾಗಿರಲಿದೆ ಎಂಬುದನ್ನು ಈ ಹಿಂದೆ ಎಲೋನ್​ ಮಸ್ಕ್​ ಹೇಳಿದ್ದರು.

ಅದರಂತೆಯೇ ಇದೀಗ ಮಾರುಕಟ್ಟೆಯಲ್ಲಿರುವ ಚಾಟ್​ಜಿಪಿಟಿ ಹಾಗೂ ಬಾರ್ಡ್​ನಂತಹ ಎಐ ಚಾಟ್‌ಬಾಟ್‌ಗಳೊಂದಿಗೆ ಪೈಪೋಟಿ ನಡೆಸಲು ಯೋಜಿಸಿದ್ದಾರೆ ಎನ್ನಲಾಗಿದೆ.

ಇದು OpenAI ನ ChatGPT ಯಂತಹ ಗಣನೀಯ ಭಾಷಾ ಮಾದರಿಗಳಿಗೆ ಅದರ ಹೋಲಿಕೆಯನ್ನು ಸೂಚಿಸುತ್ತದೆ. ರಿಯಲ್ ಟೈಮ್ ಅಪ್​ಡೇಟ್​​ಗಳನ್ನು ನೀಡಲು ಚಾಟ್​-ಜಿಪಿಟಿ ಹಿಂದುಳಿದಿದೆ. ಆದರೆ ಗೋರ್ಕ್​ನಲ್ಲಿ ಇದು ಸಾಧ್ಯ. x ಮುಖಾಂತರ ಗೋರ್ಕ್​ಗೆ ರಿಯಲ್ ಟೈಮ್​ ಸುದ್ದಿ ದೊರೆಯುತ್ತದೆ ಎಂದು ಮಸ್ಕ್​ ತಿಳಿಸಿದ್ದಾರೆ. ಸಧ್ಯಕ್ಕೆ ಇದು ಕೆಲವು ನಿಯಮಿತ ಬಳಕೆದಾರರಿಗೆ ಲಭ್ಯವಿದ್ದು ಕೆಲ ದಿನಗಳಲ್ಲಿ x ಪ್ರೀಮಿಯಂ ಬಳಕೆದಾರರಿಗೆ ಸಿಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net