

ದೆಹಲಿ: ಸಾಮಾಜಿಕ ಜಾಲತಾಣ ದಿಗ್ಗಜ ಕಂಪನಿಗಳ ಪೈಕಿ ಮುಂಚೂಣಿಯಲ್ಲಿರುವ ಟ್ವಿಟರ್ ಖರೀದಿಸಿದ ದಿನದಿಂದ ಸದಾ ಸುದ್ದಿಯಲ್ಲಿರುವ ಎಲಾನ್ ಮಸ್ಕ್, ತನ್ನ ಕಂಪನಿಯ ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದ್ದು, ಟ್ವಿಟರ್‌ನಲ್ಲಿ ಪೋಸ್ಟ್ ನೋಡಲು ಮತ್ತೊಂದು ಬದಲಾವಣೆಗೆ ಮುಂದಾಗಿದ್ದಾರೆ.
ಈ ಕುರಿತು ಎಲೋನ್ ಮಸ್ಕ್ ಮಾಹಿತಿ ನೀಡಿದ್ದು, ಡೇಟಾ ಸ್ಕ್ರ್ಯಾಪಿಂಗ್ ಮತ್ತು ಸಿಸ್ಟಮ್ ಮ್ಯಾನಿಪ್ಯುಲೇಷನ್‌ನ ಹೆಚ್ಚಾಗಿರುವ ಹಿನ್ನೆಲೆ, ಇದನ್ನು ನಿಯಂತ್ರಿಸಲು ದಿನಕ್ಕೆ ಎಷ್ಟು ಟ್ವೀಟ್‌ಗಳನ್ನು ಓದಬಹುದು ಎಂಬ ಮಿತಿಯನ್ನು ಅಳವಡಿಸಲು ಟ್ವಿಟರ್ ಮುಂದಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಫರ್ನೀಚರ್ ಎಕ್ಸ್ಪೋಗೆ ಭರ್ಜರಿ ಪ್ರತಿಕ್ರಿಯೆ: ಜಾಲಹಳ್ಳಿ ಎಚ್ಎಂಟಿ ಮೈದಾನದಲ್ಲಿ ಆಯೋಜನೆ, ಜು. 9ರವರೆಗೆ ಪ್ರದರ್ಶನ
ಟ್ವಿಟರ್‌ನಲ್ಲಿ ಪರಿಶೀಲಿಸಿದ ಖಾತೆಗಳು ತಾತ್ಕಾಲಿಕವಾಗಿ ದಿನಕ್ಕೆ 6,000 ಪೋಸ್ಟ್‌ಗಳನ್ನು ಓದುವುದಕ್ಕೆ ಸೀಮಿತವಾಗಿವೆ. ಪರಿಶೀಲಿಸದ ಖಾತೆಗಳು ದಿನಕ್ಕೆ 600 ಮತ್ತು ಹೊಸದಾಗಿ ಖಾತೆ ತೆರೆದಿರುವವ ಹಾಗೂಪರಿಶೀಲಿಸದ ಖಾತೆಗಳು 300 ಟ್ವೀಟ್‌ಗಳನ್ನು ಓದಲು ಸೀಮಿತವಾಗಿರುತ್ತವೆ ಎಂದು ಮಸ್ಕ್ ತಿಳಿಸಿದ್ದಾರೆ.
ನಂತರ ಈ ತಾತ್ಕಾಲಿಕ ಓದುವ ಮಿತಿಯನ್ನು ಪರಿಶೀಲಿಸಿದ ಬಳಿಕ ಮತ್ತೊಮ್ಮೆ ಮಾಹಿತಿ ನೀಡಿದ ಮಸ್ಕ್, ಬಳಕೆದಾರಿಗೆ ದಿನಕ್ಕೆ 8000 ಟ್ವೀಟ್, ಪರಿಶೀಲಿಸದವರಿಗೆ ದಿನಕ್ಕೆ 800 ಹೊಸಖಾತೆದಾರರು ಹಾಗೂ ಪರಿಶೀಲಿಸದ ಬಳಕೆದಾರರಿಗೆ ದಿನಕ್ಕೆ 400 ಟ್ವೀಟ್‌ಗಳನ್ನು ಓದಬಹುದು ಎಂದು ಸಹ ಟ್ವೀಟ್ ಮುಖಾಂತರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರೇಡಿಯೋ ಚಾನೆಲ್ಗಳ ವಿಲೀನ ಬೇಡಾ; ಹಾಲಿ ನಿರೂಪಕರು ನೀರುದ್ಯೋಗಿಗಳಾಗುತ್ತಾರೆ.. ಈಗ ಇರುವ ರೀತಿಯಲ್ಲಿಯೇ ನಡೆಸಲು ಅನುಮತಿ ಕೋರಿ ಸಿಎಂಗೆ ಪತ್ರ
ಈ ಹಿಂದೆ, ಟ್ವೀಟ್‌ಗಳನ್ನು ವೀಕ್ಷಿಸಲು ಬಳಕೆದಾರರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಖಾತೆಯನ್ನು ಹೊಂದಿರಬೇಕು ಎಂದು ಟ್ವಿಟರ್ ಘೋಷಿಸಿತ್ತು. ಜತೆಗೆ ನೂರಾರು ಸಂಸ್ಥೆಗಳು ಟ್ವಿಟರ್ ಡೇಟಾವನ್ನು ಅತ್ಯಂತ ಆಕ್ರಮಣಕಾರಿಯಾಗಿ ಕದಿಯುತ್ತಿದ್ದು, ಇದು ಬಳಕೆದಾರರ ಅನುಭವದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಲೋನ್ ಮಸ್ಕ್ ಹೇಳಿದ್ದಾರೆ.(ಏಜೆನ್ಸೀಸ್)