More

    ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ; ಎಲ್ಲಿಸ್ ಪೆರ್ರಿಗೆ ಒಡೆದ ಗಾಜು ಗಿಫ್ಟ್ ನೀಡಿದ ಟಾಟಾ

    ನವದೆಹಲಿ: ಶುಕ್ರವಾರ ನಡೆದ ವುಮೆನ್ಸ್​ ಪ್ರೀಮಿಯರ್​ ಲೀಗ್​ ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಹಾಲಿ ಚಾಂಪಿಯನ್ಸ್​ ಮುಂಬೈ ಇಂಡಿಯನ್ಸ್​ ಅನನ್ಉ ಮಣಿಸಿ ಫೈನಲ್​ ಪ್ರವೇಶಿಸಿದ್ದು, ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಮೆಗ್ ಲ್ಯಾನಿಂಗ್ ಮುಂದಾಳತ್ವದ ಡೆಲ್ಲಿ ಪಡೆ ಸ್ಮೃತಿ ಮಂಧಾನ ನಾಯಕತ್ವದ ಆರ್​ಸಿಬಿ ಬಳಗವನ್ನು ಎದುರಿಸಲಿದೆ.

    ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಟಗಾರ್ತಿ ಎಲ್ಲಿಸ್​ ಪೆರ್ರಿ ತಮ್ಮ ಆಟದ ಮೂಲಕ ಸಂಕಷ್ಟದ ಸಮಯದಲ್ಲಿ ತಂಡದ ಕೈ ಹಿಡಿದಿದ್ದು, ಆರ್​ಸಿಬಿ ಅಭಿಮಾನಿಗಳು ಇವರನ್ನು ಫೀಮೇಲ್​ ಎಬಿಡಿ ಎಂದು ಹೆಸರಿಸಿದ್ದಾರೆ. ಎಲಿಮಿನೇಟರ್​ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನ ನೀದಿದ ಎಲ್ಲಿಸ್​ ಪೆರ್ರಿಗೆ ಟಾಟಾ ಗ್ರೂಪ್ಸ್​​​ ವಿಶೇಷವಾಗಿ ಸತ್ಕರಿಸಿದೆ.

    ಮಾರ್ಚ್ 04 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಎಲ್ಲಿಸ್ ಪೆರ್ರಿ ಭರ್ಜರಿ ಸಿಕ್ಸ್​ ಸಿಡಿಸಿದ್ದರು. ಲಾಂಗ್ ಆನ್​ನತ್ತ ಬಾರಿಸಿದ್ದ ಈ ಚೆಂಡು ನೇರವಾಗಿ ಹೋಗಿ ಬಿದ್ದದ್ದು ಬೌಂಡರಿ ಲೈನ್​ ಹತ್ತಿರ ನಿಲ್ಲಿಸಲಾಗಿದ್ದ ಟಾಟಾ ಪಂಚ್ ಇವಿ ಕಾರಿನ ಕಿಟಕಿಗೆ ಬಿತ್ತು. ಎಲ್ಲಿಸ್​ ಪೆರ್ರಿ ಬಾರಿಸಿದ 80 ಮೀಟರ್​ ಸಿಕ್ಸರ್​ಗೆ ಟಾಟಾ ಕಾರಿನ ಗಾಜು ಒಡೆದು ಹೋಗಿತ್ತು. ಇದೀಗ ಆ ಒಡೆದು ಹೋದ ಹಾಜಿಗೆ ಫ್ರೇಮ್​ ಹಾಕಿಸಿ ಎಲ್ಲಿಸ್​ ಪೆರ್ರಿಗೆ ಟಾಟಾ ಗ್ರೂಪ್ಸ್​ ಉಡುಗೊರೆಯಾಗಿ ನೀಡಿದೆ.

    Tata Punch EV

    ಇದನ್ನೂ ಓದಿ: ಬೆಂಗಾಲ್​ ಟೈಗರ್ಸ್​ ವಿರುದ್ಧ ಭರ್ಜರಿ ಜಯ; ಫಿನಾಲೆಗೆ ಲಗ್ಗೆ ಇಟ್ಟ ಕರ್ನಾಟಕ ಬುಲ್ಡೋಜರ್ಸ್

    80 ಮೀಟರ್​ನ ಸಿಕ್ಸರ್​ಗೆ ಟಾಟಾ ಕಾರಿನ ವಿಂಡೋ ಗ್ಲಾಸ್ ಒಡೆದು ಹೋಗಿತ್ತು. ಇದೀಗ ಅದೇ ಗ್ಲಾಸ್ ಅನ್ನು ಫ್ರೇಮ್ ಹಾಕಿ ಎಲ್ಲಿಸ್ ಪೆರ್ರಿಗೆ ಟಾಟಾ ಕಂಪೆನಿ ಗಿಫ್ಟ್ ನೀಡಿದೆ. ಈ ಮೂಲಕ ಪೆರ್ರಿಯ ಸ್ಮರಣೀಯ ಇನಿಂಗ್ಸ್ ಅನ್ನು ಹೊಡೆದ ಗಾಜಿನೊಂದಿಗೆ ಟಾಟಾ ಗ್ರೂಪ್ಸ್ ಮತ್ತಷ್ಟು ಸ್ಮರಣೀಯವಾಗಿಸಿದೆ. ಸದ್ಯ ಭರ್ಜರಿ ಫಾರ್ಮ್​ನಲ್ಲಿರುವ ಎಲ್ಲಿಸ್ ಪೆರ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೈನಲ್​ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

    ಮುಂಬೈ ಇಂಡಿಯನ್ಸ್ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿದ್ದ ಪೆರ್ರಿ, ಎಲಿಮಿನೇಟರ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಆರ್​ಸಿಬಿ ತಂಡವು ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಚೊಚ್ಚಲ ಬಾರಿ ಫೈನಲ್​ಗೇರುವಂತೆ ಮಾಡಿದ್ದಾರೆ. ಭಾನುವಾರ (ಮಾರ್ಚ್​17) ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಉಭಯ ತಂಡಗಳು ಚೊಚ್ಚಲ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದು, ಅಂತಿಮವಾಗಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts