ಫ್ರೆಂಡ್ಸ್ ಜತೆ ಹೊಸ ವರ್ಷಾಚರಣೆಗೆ ಹೋಟೆಲ್​ಗೆ ಹೋದ ಗಗನಸಖಿಗೆ ಕಾದಿತ್ತು ಬಿಗ್​ ಶಾಕ್​..!

Air Hostess
Published on

ಮನಿಲಾ:​ ಗಗನಸಖಿಯೊಬ್ಬಳ ಮೃತದೇಹವೂ ಫಿಲಿಪೈನ್ಸ್​ನ ಹೋಟೆಲ್​ ಒಂದರ ಬಾತ್​ಟಬ್​ನಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳ ವಿರುದ್ಧ ಗ್ಯಾಂಗ್​ರೇಪ್​ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.

ಕ್ರಿಸ್ಟಿನ್​ ಏಂಜೆಲಿಕಾ ಡಾಸೆರಾ (23) ಕಳೆದ ವಾರ ಫಿಲಿಪೈನ್ಸ್​ನ ಅದ್ಧೂರಿ ನಗರದ ಗಾರ್ಡನ್​ ಹೋಟೆಲ್​ನಲ್ಲಿ ತಮ್ಮ ಫ್ರೆಂಡ್ಸ್​ ಒಟ್ಟಿಗೆ ಹೊಸ ವರ್ಷಾಚರಣೆಗೆಂದು ಸೇರಿದ್ದರು. ಫಿಲಿಪೈನ್ಸ್​ನ ಆರ್ಥಿಕ ನಗರವೆಂದೇ ಖ್ಯಾತಿಯಾಗಿರುವ ಮಕಾತಿಯ ಫೋರ್​ ಸ್ಟಾರ್​ ಹೋಟೆಲ್​ ರಾತ್ರಿ ಸಂಭ್ರಮಾಚರಣೆಯಲ್ಲಿ ಫ್ರೆಂಡ್ಸ್​ ಮತ್ತು ಸಹೋದ್ಯೋಗಿಗಳ ಜತೆ ತೊಡಗಿದ್ದರು.

ಆದರೆ, ಮಾರನೇ ದಿನ ಬೆಳಗ್ಗೆ 10 ಗಂಟೆಗೆ ಎದ್ದ ಕ್ರಿಸ್ಟಿನ್​ ಸಹೋದ್ಯೋಗಿ ರೊಮ್ಮೆಲ್​ ಗಾಲಿಡ, ಬಾತ್​ಟಬ್​ನಲ್ಲಿ ಕ್ರಿಸ್ಟಿನ್​ ಹೆಣವಾಗಿ ಬಿದ್ದಿದ್ದನ್ನು ಗಮನಿಸಿದ್ದಾನೆ. ಗಾಲಿಡಾ ತಾನು ಮಲಗಲು ಹೋಗುವ ಮುನ್ನ ಮಲಗಿದ್ದ ಕ್ರಿಸ್ಟಿನ್​ಳಿಗೆ ಬ್ಲಾಂಕೆಟ್​ ಹೊದಿಸಿದ್ದನಂತೆ. ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಬಾತ್​ಟಬ್​ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಆಕೆಯ ದೇಹ ನೀಲಿ ಬಣ್ಣಕ್ಕೆ ತಿರುಗುತ್ತಿತ್ತು. ತಕ್ಷಣ ಹೋಟೆಲ್​ ಸಿಬ್ಬಂದಿ ತಿಳಿಸಿ, ಮಕಾತಿಯ ಮೆಡಿಕಲ್​ ಕ್ಲೀನಿಕ್​ ಕರೆದೊಯ್ದವು. ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಗಾಲಿಡಾ ತಿಳಿಸಿದ್ದಾನೆ.

ಸದ್ಯ ತನಿಖಾಗಾರರು ಕ್ರಿಸ್ಟಿನ್​ ಮರಣೋತ್ತರ ಪರೀಕ್ಷೆಗಾಗಿ ಎದುರ ನೋಡುತ್ತಿದ್ದಾರೆ. ಆದರೆ, ಆಕೆಯ ಮೃತದೇಹದಲ್ಲಿ ಅನೇಕ ಗಾಯಗಳಾಗಿರುವುದು ಕಂಡುಬಂದಿದೆ. ತೊಡೆ ಮತ್ತು ಮಂಡಿಗಳಲ್ಲಿ ಗಾಯದ ಗುರುತುಗಳಿವೆ. ಅಲ್ಲದೆ, ಆಕೆ ರೇಪ್​ ಸಂತ್ರಸ್ತೆ ಎಂಬುದನ್ನು ಆಕೆಯ ಮೃತದೇಹವೇ ಸುಳಿವು ನೀಡುತ್ತಿದೆ.

ಅನುಮಾನ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಕ್ರಿಸ್ಟಿನ್​ ಜತೆ ಹೋಟೆಲ್​ನಲ್ಲಿ ಇದ್ದ 11 ಮಂದಿಯ ವಿರುದ್ಧ ರೇಪ್​ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಆದರೆ, ಮರಣೋತ್ತರ ವರದಿ ಬರುವವರೆಗೆ ಯಾವುದನ್ನು ಖಚಿತಪಡಿಸಲು ಸಾಧ್ಯವಿಲ್ಲ. ವರದಿಗಾಗಿ ಎದುರು ನೋಡುತ್ತಿದ್ದೇವೆ ಎಂದು ಮಕಾತಿ ನಗರ ಪೊಲೀಸ್​ ಮುಖ್ಯಸ್ಥ ಕರ್ನಲ್​ ಹರೊಲ್ಡ್​ ಡೆಪೊಸಿಟರ್​ ಫಿಲಿಪ್ಪೈನ್ಸ್​ ಡೈಲಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ 11ರಲ್ಲಿ ಮೂವರು ವಿಚಾರಣೆಗೆ ಮುಂದೆ ಬಂದಿದ್ದಾರೆ. ಇನ್ನು ಉಳಿದವರು ಹಿಂದೆ ಉಳಿದಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ ಎಂದು ಹರೊಲ್ಡ್​ ಡೆಪೊಸಿಟರ್​ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net